ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 35 ವಾರ್ಡ್‌ಗಳ ಮರುಪರಿಶೀಲನೆ ಮಾಡಲಾಗಿದೆ. ಮೊದಲು ಬಿಡುಗಡೆ ಮಾಡಲಾಗಿದ್ದ ಮೀಸಲಾತಿಯಲ್ಲಿ ಕೆಲ ವಾರ್ಡ್‌ಗಳ ಮೀಸಲಾತಿ ಬದಲಾವಣೆ ಮಾಡಿ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ ಮಂಜುನಾಥ ಆದೇಶ ಹೊರಡಿಸಿದ್ದಾರೆ.
ಕಳೆದ ಅಗಸ್ಟ್ 2011ರ ಜನಗಣತಿ ಆಧಾರದ ಮೇಲೆ ಮೀಸಲಾತಿ ಈ ಮೊದಲು ಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಆಕ್ಷೇಪಣೆ ಬಳಿಕ ಅಂತಿಮವಾಗಿ ಮೀಸಲಾತಿ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಇದನ್ನೂ ಓದಿ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟ
ಸಾಮಾನ್ಯ 9, ಸಾಮಾನ್ಯ ಮಹಿಳೆ 9, ಹಿಂದುಳಿದ ವರ್ಗ 5, ಹಿಂದುಳಿದ ವರ್ಗ ಎ ಮಹಿಳೆ 2, ಪರಿಶಿಷ್ಟ ಜಾತಿ 3, ಪರಿಶಿಷ್ಟ ಜಾತಿ ಮಹಿಳೆ 2, ಪರಿಶಿಷ್ಟ ಪಂಗಡ 1, ಹಿಂದುಳಿದ ವರ್ಗ ಬಿ 1 ಹಾಗೂ ಹಿಂದುಳಿದ ವರ್ಗ ಬಿ ಮಹಿಳೆ 1ರಂತೆ ವಿಂಗಡಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವಾರ್ಡ್ ವಾರು ಮೀಸಲಾತಿ ಪಟ್ಟಿ:
1. ಹಿಂದುಳಿದ ವರ್ಗ- ಎ ಮಹಿಳೆ
2. ಹಿಂದುಳಿದ ವರ್ಗ ಎ
3. ಪರಿಶಿಷ್ಠ ಜಾತಿ ಮಹಿಳೆ
4. ಪರಿಶಿಷ್ಠ ಜಾತಿ
5. ಹಿಂದುಳಿದ ವರ್ಗ- ಎ
6. ಸಾಮಾನ್ಯ
7. ಸಾಮಾನ್ಯ
8.ಹಿಂದುಳಿದ ವರ್ಗ-ಎ
9. ಸಾಮಾನ್ಯ
10. ಹಿಂದುಳಿದ ವರ್ಗ- ಎ ಮಹಿಳೆ
11. ಪರಿಶಿಷ್ಠ ಜಾತಿ
12. ಸಾಮಾನ್ಯ ಮಹಿಳೆ
13. ಸಾಮಾನ್ಯ ಮಹಿಳೆ
14. ಪರಿಶಿಷ್ಠ ಜಾತಿ
15. ಸಾಮಾನ್ಯ ಮಹಿಳೆ
16. ಹಿಂದುಳಿದ ವರ್ಗ- ಮಹಿಳೆ
17. ಸಾಮಾನ್ಯ ಮಹಿಳೆ
18. ಪರಿಶಿಷ್ಠ ಪಂಗಡ
19. ಸಾಮಾನ್ಯ ಮಹಿಳೆ
20. ಹಿಂದುಳಿದ ವರ್ಗ- ಎ ಮಹಿಳೆ
21.ಸಾಮಾನ್ಯ
22. ಸಾಮಾನ್ಯ
23. ಸಾಮಾನ್ಯ
24. ಹಿಂದುಳಿದ ವರ್ಗ- ಬ ಮಹಿಳೆ
25. ಸಾಮಾನ್ಯ ಮಹಿಳೆ
26. ಸಾಮಾನ್ಯ
27. ಹಿಂದುಳಿದ ವರ್ಗ- ಎ ಮಹಿಳೆ
28. ಸಾಮಾನ್ಯ ಮಹಿಳೆ
29. ಸಾಮಾನ್ಯ
30. ಹಿಂದುಳಿದ ವರ್ಗ- ಬ
31. ಸಾಮಾನ್ಯ ಮಹಿಳೆ
32. ಸಾಮಾನ್ಯ
33. ಪರಿಶಿಷ್ಠ ಜಾತಿ ಮಹಿಳೆ
34. ಸಾಮಾನ್ಯ ಮಹಿಳೆ
35. ಹಿಂದುಳಿದ ವರ್ಗ- ಎ