ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ನಡೆದಿದ್ದ ಅಕ್ಕ ತಮ್ಮನ ಜೋಡಿ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ರಾಜಶ್ರೀ ಪತಿ ಶಂಕರಗೌಡ ಬಿರಾದಾರ. ಆತನ ಸಹೋದರರಾದ ಅಪ್ಪಾ ಸಾಹೇಬ್ ಬಿರಾದಾರ, ಸಂಗಣ್ಣ ಬಿರಾದಾರ ಹಾಗೂ ಮಂಜುನಾಥ ಬಿರಾದಾರ ಬಂಧಿತರು.
ಜೂ.6 ರಂದು ಮಕ್ಕಳ ಟಿಸಿ ತರಲು ರಾಜಶ್ರಿ ಯರಗಲ್ಲ ಹಾಗೂ ಆಕೆಯ ತಮ್ಮ ನಾನಾಗೌಡ ಯರಗಲ್ಲ ಬೈಕ್ ಮೇಲೆ ಹೋಗುತ್ತಿದ್ದರು. ಈ ವೇಳೆ, ಬೈಕ್ ನಿಲ್ಲಿಸಿ ರಾಜಶ್ರೀ ಪತಿ ಶಂಕರಗೌಡ ಹಾಗೂ ಆತನ ಸಹಚರರು ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು. ಕಳೆದ ರಾತ್ರಿ(ಗುರುವಾರ) ಸಿಂದಗಿ ಪಟ್ಡಣದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ : ಸಿಂದಗಿಯಲ್ಲಿ ಅಕ್ಕ, ತಮ್ಮನ ಬರ್ಬರ ಹತ್ಯೆ
ಘಟನೆ ವಿವರ: ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಶಂಕರಗೌಡ ಬಿರಾದಾರ ಜತೆ ರಾಜಶ್ತೀ ಯರಗಲ್ಲ ಅವರನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ, ಶಂಕರಗೌಡ ಪತ್ನಿ ರಾಜಶ್ರೀಯನ್ನು ಪದೇ ಪದೆ ತವರು ಮನೆಗೆ ಬಿಟ್ಟು ಬರುತ್ತಿದ್ದ. ಅಲ್ಲದೇ ಪತಿಯ ಮನೆಯವರು ರಾಜಶ್ರೀಗೆ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಬೇಸತ್ತ ರಾಜಶ್ರೀ ತವರು ಮನೆಯಲ್ಲಿ ಮಕ್ಕಳೊಂದಿಗೆ ಉಳಿದಿದ್ದರು.
ಈ ನಡುವೆ ಪತಿ ಶಂಕರಗೌಡ ಪತ್ನಿಯನ್ನು ಮನೆಗೆ ವಾಪಸ್ ಬಾ ಎಂದು ಕರೆದ್ದನಂತೆ. ಆಕೆ, ಬರದ ಕಾರಣ ಜೂ. 6ರಂದು ರಾಜಶ್ರೀ ತನ್ನ ತಮ್ಮ ನಾನಾಗೌಡ ಜತೆ ಮಕ್ಕಳ ಟಿಸಿ ತರಲು ಪತಿಯ ಊರು ಸಿಂದಗಿಗೆ ಬೈಕ್ನಲ್ಲಿ ಬರುತ್ತಿದ್ದಾಗ ರಾಜಶ್ರೀ ಪತಿ ಶಂಕರಗೌಡ ಹಾಗೂ ಆತನ ಸಹೋದರರು ಅವರನ್ನು ಅಡ್ಡಗಟ್ಟಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಶಂಕರಗೌಡ ಬಿರಾದಾರ ಕುಟುಂಬದ ಐವರು ಸದಸ್ಯರ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಅಕ್ಕ - ತಮ್ಮನ ಕೊಲೆ ಪ್ರಕರಣ: ಒಂದೇ ಕುಟುಂಬದ ಐವರ ವಿರುದ್ಧ ಎಫ್ಐಆರ್