ವಿಜಯಪುರ : ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ಗರ್ಭಿಣಿಯರಿಗೆ ಯಾವುದೇ ನೋವು ಬಾರದಂದಂತೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಹೆರಿಗೆ ಮಾಡಿಸುತ್ತಾರೆ. ಈ ಮೂಲಕ ಮೊದಲು ಬಾರಿಗೆ ನೋವು ರಹಿತ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಈ ಆಸ್ಪತ್ರೆಗೆ ಸಲ್ಲುತ್ತದೆ.
ಯಾವುದೇ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿದಾಗ ಸಹಜವಾಗಿ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸುತ್ತಾರೆ. ಆದರೆ, ವಿಜಯಪುರ ನಗರದ ಜನನಿ ಹೆರಿಗೆ ಆಸ್ಪತ್ರೆಯ ವೈದ್ಯರು ಮಾತ್ರ ಗರ್ಭಿಣಿಯರಿಗೆ ಯಾವುದೇ ನೋವು ಬಾರದ ರೀತಿ ಹೆರಿಗೆ ಮಾಡಿಸುವಂತಹ ಹೊಸ ಪದ್ಧತಿ ಬಳಸುತ್ತಿದ್ದಾರೆ.
ಓದಿ: ಮೇಲ್ಮನೆ ಮಲ್ಲಯುದ್ಧ.. ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ ಸಭಾಪತಿ
ರೇಖಾ ಬಿರಾದಾರ ಎಂಬ ಗರ್ಭಿಣಿ ಈ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅವರಿಗೆ ಎಪಿಡ್ಯೂರಲ್ ಅರವಳಿಕೆ ನೀಡಿ ನೋವಾಗದ ರೀತಿ ಹೆರಿಗೆ ಮಾಡಿಸಿದ್ದಾರೆ. ತಾಯಿ -ಮಗು ಆರೋಗ್ಯವಾಗಿದ್ದು, ಬಾಣಂತಿ ಆಸ್ಪತ್ರೆ ವೈದ್ಯರ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೋವು ರಹಿತ ಹೆರಿಗೆ ಪದ್ಧತಿ ಕೇವಲ ಮಹಾನಗರದಲ್ಲಿ ಮಾತ್ರ ಇತ್ತು. ಇದೇ ಮೊದಲು ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲಾಗಿದೆ. ಇದಕ್ಕಾಗಿ ವಿಶೇಷ ತರಬೇತಿ ಪಡೆದ ವೈದ್ಯರು ಜನನಿ ಆಸ್ಪತ್ರೆಯಲ್ಲಿ ಮೊದಲು ಬಾರಿಗೆ ನೋವು ರಹಿತ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಪಡೆದಿದ್ದಾರೆ.