ETV Bharat / state

ವಿಜಯಪುರ ಪಾಲಿಕೆ ಚುನಾವಣೆ: ಪತ್ನಿ ಜೊತೆ ಸಾಲಿನಲ್ಲಿ ನಿಂತು ಮತದಾನ ಮಾಡಿದ ಡಿಸಿ

ಮತದಾನ ಕೇಂದ್ರಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಡಾ ವಿಜಯ ಮಹಾಂತೇಶ್ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್​ ಡಿ ಆನಂದ ಕುಮಾರ್ ಭೇಟಿ ನೀಡಿ, ಅಗತ್ಯ ಸಲಹೆ ಸೂಚನೆ ನೀಡಿದರು. ಮತದಾರರ ಸಮಸ್ಯೆಗಳನ್ನು ಆಲಿಸಿ, ಸಲಹೆ ನೀಡಿದರು.

dc-cast-his-vote-standing-in-line-with-his-wife
ಪತ್ನಿ ಜೊತೆ ಸಾಲಿನಲ್ಲಿ ನಿಂತು ಮತದಾನ ಮಾಡಿದ ಡಿಸಿ
author img

By

Published : Oct 28, 2022, 12:44 PM IST

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ ವಿಜಯ ಮಾಹಾಂತೇಶ ದಾನಮ್ಮನವರ ಮತ್ತು ಅವರ ಪತ್ನಿ ಶ್ವೇತಾ ದಾನಮ್ಮನವರ ಕುಟುಂಬ ಸಮೇತರಾಗಿ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದರಬಾರ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿ ಮತದಾನದ ಮಹತ್ವ ಸಾರಿದರು.

ಮತದಾನ ಒಂದು ಪವಿತ್ರವಾದ ಕರ್ತವ್ಯ, ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ ಕೂಡಾ. ನಮ್ಮ ಮತ ಪ್ರಗತಿಗೆ ಬರೆಯುವ ಮುನ್ನುಡಿ. ಮತದಾನ ನಮ್ಮೆಲ್ಲರ ಜವಾಬ್ದಾರಿಯೂ ಸಹ ಆಗಿದೆ ಎಂದು ಹೇಳಿದರು.

ವಾರ್ಡ್ ಸಂಖ್ಯೆ 48ರ ಶಶಹಾಪೂರ ಅಗಸಿಯಲ್ಲಿನ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.6ರ ಕೊಠಡಿ ಸಂಖ್ಯೆ 01ರಲ್ಲಿ ನಡೆಯುತ್ತಿರುವ ಮತದಾನ ಕೇಂದ್ರಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಡಾ ವಿಜಯ ಮಹಾಂತೇಶ್ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್​ ಡಿ ಆನಂದ ಕುಮಾರ್ ಭೇಟಿ ನೀಡಿ, ಅಗತ್ಯ ಸಲಹೆ ಸೂಚನೆ ನೀಡಿದರು. ಮತದಾರರ ಸಮಸ್ಯೆಗಳನ್ನು ಆಲಿಸಿ, ಸಲಹೆ ನೀಡಿದರು.

ಮಾತಿನ ಚಕಮಕಿ: ತಹಶೀಲ್ದಾರ್​​ ಹಾಗೂ ಮತದಾರರ ಮಧ್ಯೆ ಮಾತಿನ ಚಕಮಕಿ ಆಗಿರುವ ಘಟನೆ ವಿಜಯಪುರ ನಗರದ ಸಿದ್ಧೇಶ್ವರ ಕಲಾ ಮಂದಿರದ ಆವರಣದಲ್ಲಿ ಶುಕ್ರವಾರ ನಡೆದಿದೆ. ನಗರದ ಮತಗಟ್ಟೆ 92ರಲ್ಲಿ ಕೆಲವು ಮತದಾರರ ಮತದಾನ ಹಕ್ಕು ಇಲ್ಲ. ಅದಕ್ಕಾಗಿ ಮತದಾರರು ಹಾಗೂ ತಹಶೀಲ್ದಾರ್ ಸಿದ್ದು ಬೋಸಗಿ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ಆಗಿದೆ.

ನಮ್ಮ ಮತದಾನ ಇಲ್ಲವಾಗಿದೆ. ಇದರಲ್ಲಿ ಕಾಣದ ಕೈಗಳ ಕೈವಾಡ ಇದೆ ಎಂದು ಮತದಾರರು ಆರೋಪಿಸಿದರು. ಇದಕ್ಕೆ ತಹಶೀಲ್ದಾರ್ ಬೋಸಗಿ ಪ್ರತಿಕ್ರಿಯೆ ನೀಡಿದ್ದು, ಮತದಾನಕ್ಕೆ ಸಂಜೆ 5ರ ವರೆಗೂ ಕಾಲಾವಕಾಶ ಇದೆ. ಮತದಾರರ ಮಾಹಿತಿ ಕಲೆ ಹಾಕಿ, ಮತಕ್ಕೆ ಅವಕಾಶ ನೀಡಲಾಗುವುದು ಎಂದರು.

ಇದನ್ನೂ ಓದಿ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ.. ಮಸ್ಟರಿಂಗ್ ಕೇಂದ್ರಕ್ಕೆ ಡಿಸಿ ಎಸ್ಪಿ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.