ETV Bharat / state

ಹೊಸ ವರ್ಷದ ಶುಭಾಶಯಗಳೆಂದು ಬರೆಯುತ್ತಿದ್ದವರ ಮೇಲೆ ಹರಿದ ಕಾರು: ಇಬ್ಬರ ದುರ್ಮರಣ ! - muddhebihala crime news

ಮಂಗಳೂರು ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಕಾಜರಬೈಲು ಬಳಿ ಹೊಸ ವರ್ಷದ ಶುಭಾಶಯಗಳು ಎಂದು ರಸ್ತೆಯ ಮೇಲೆ ಬರೆಯುತ್ತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

muddhebihala
ಸಾವನ್ನಪ್ಪಿದವರು
author img

By

Published : Jan 2, 2021, 9:13 AM IST

ಮುದ್ದೇಬಿಹಾಳ: ಹೊಸ ವರ್ಷದ ಶುಭಾಶಯಗಳು ಎಂದು ರಸ್ತೆಯ ಮೇಲೆ ಬರೆಯುತ್ತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಕಾಜರಬೈಲು ಬಳಿ ಗುರುವಾರ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಮೃತರಾದವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೇಸಾಪೂರ ಗ್ರಾಮದ ಶರಣಪ್ಪ ಗೌಡರ (27) ಹಾಗೂ ಸಿದ್ದಣ್ಣ ನಾಗರಬೆಟ್ಟ (30) ಆಗಿದ್ದರೆ, ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ತೌಸೀಫ ಅಹ್ಮದ ಸಿಕ್ಕಲಗಾರ (20) ಹಾಗೂ ಬಸವರಾಜ ಭೋವೇರ(25) ಅವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಇವರೆಲ್ಲ ಜೆಸಿಬಿ ಹಾಗೂ ಟಿಪ್ಪರ್ ನಡೆಸುವ ಕೆಲಸ ಮಾಡುತ್ತಿದ್ದರು.

ಓದಿ: ಮೂವರು ತಮ್ಮಂದಿರಿಂದಲೇ ಬರ್ಬರವಾಗಿ ಹತ್ಯೆವಾದ ಅಣ್ಣ.. ಪ್ರೀತಿಗಾಗಿ ಪ್ರಾಣಬಿಟ್ಟ ಸಹೋದರ..!

ಇನ್ನು ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ತಡರಾತ್ರಿ ನಡೆದಿದೆ ಎಂದು ಗ್ರಾಮದ ಗಣ್ಯರಾದ ಶಾಂತಗೌಡ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.