ETV Bharat / state

ಭೀಮಾತೀರದ ಮಹಾದೇವ ಭೈರಗೊಂಡ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರು ಶರಣಾಗತಿ - Two accused surrendered to court in connection with the Mahadev Sahukara Bhairogura attempt murder case

ಭೀಮಾತೀರದ ಮಹಾದೇವ ಭೈರಗೊಂಡ ಕೊಲೆ ಯತ್ನ ಪ್ರಕರಣ- ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ಶರಣು- ಹಲವರು ವಶಕ್ಕೆ

two-accused-surrendered-to-court-in-connection-with-the-mahadev-sahukara-bhairogura-attempt-murder-case
ಭೀಮಾತೀರದ ಹಂತಕ ಮಹಾದೇವ ಭೈರಗೊಂಡ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರು ಶರಣಾಗತಿ
author img

By

Published : Aug 3, 2022, 11:44 AM IST

ವಿಜಯಪುರ : ಭೀಮಾತೀರದ ಹಂತಕ ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳು ಶರಣಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯ ಪತ್ನಿ ವಿಮಲಾಬಾಯಿ ಚಡಚಣ ಹಾಗೂ ಸೋನು ರಾಠೋಡ 4ನೇ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಇತ್ತೀಚೆಗೆ ಎಡಿಜಿಪಿ ಅಲೋಕಕುಮಾರ್ ಅವರು ಚಡಚಣಕ್ಕೆ ಭೇಟಿ ನೀಡಿ ಎಲ್ಲ ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡು, ತಕ್ಷಣ ಶರಣಾಗತಿ ಆಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಹೆದರಿದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಕಳೆದ ವರ್ಷ ನ.20ರಂದು ಸಿನಿಮೀಯ ರೀತಿಯಲ್ಲಿ ಮಹಾದೇವ ಸಾಹುಕಾರ ಬೈರಗೊಂಡ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ಈಗಾಗಲೇ 36 ಜನರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಚಡಚಣಗೆ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಶರಣಾಗದಿದ್ದರೆ ಆಸ್ತಿ ಜಪ್ತಿ ಮಾಡುವುದಾಗಿ ಎಸ್ಪಿ ಆನಂದಕುಮಾರ ಎಚ್ಚರಿಕೆ ನೀಡಿದ್ದಾರೆ.

ಓದಿ : ಕೌಟುಂಬಿಕ ಕಲಹಕ್ಕೆ ವರದಕ್ಷಿಣೆ ಕಿರುಕುಳದಡಿ ಶಿಕ್ಷೆ ವಿಧಿಸಿದ ಪೊಲೀಸ್​ ಅಧಿಕಾರಿಗೆ ₹1 ಲಕ್ಷ ದಂಡ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.