ವಿಜಯಪುರ: ನೇಮಕವಾಗದೆ ಉಳಿದ ಬ್ಯಾಕ್ಲಾಗ್ ಹುದ್ದೆಗಳಿಗಳ ಭರ್ತಿಗೆ ಸರ್ಕಾರ ತಕ್ಷಣವೇ ಮುಂದಾಗುವಂತೆ ಜಿಲ್ಲಾ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಪದವೀಧರ ನಿರುದ್ಯೋಗ ಯುವಕ ಸಂಘಟನೆಯಿಂದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಬ್ಯಾಕ್ಲಾಗ್ ಹುದ್ದೆಗಳು ಖಾಲಿ ಉಳಿದಿವೆ. ಆದ್ರೆ ಸರ್ಕಾರ ಮಾತ್ರ ಹದ್ದೆ ಭರ್ತಿ ಮಾಡಲು ಮುಂದಾಗುತ್ತಿಲ್ಲ. ಅಲ್ಲದೆ ಕಳೆದ 2001ರಿಂದ ಇಲ್ಲಿವರೆಗೂ ಸಂಬಂಧಪಟ್ಟ ಇಲಾಖೆಗೆ ಹಲವು ಹುದ್ದೆಗಳ ನೇಮಕ ಆದೇಶ ಮಾಡಿ ಎಂದು ಯುವಕರು ಪತ್ರದ ಮೂಲಕ ತಿಳಿಸಿದರೂ ಪರಿಗಣಿಸಿಲ್ಲ. ಕಳೆದ ಹಲವು ವರ್ಷಗಳಿಂದ ಅನೇಕ ಅಭ್ಯರ್ಥಿಗಳು ಸರ್ಕಾರದ ಆದೇಶ ಎದರು ನೋಡುತ್ತಿದ್ದು, ನಿರಾಸೆಯುಂಟಾಗಿದೆ ಎಂದು ಯುವಕರು ಜಿಲ್ಲಾಧಿಕಾರಿಗೆ ತಿಳಿಸಿದರು.
ಹೀಗೆ ನಿರ್ಲಕ್ಷ್ಯ ಮಾಡುವುದರಿಂದ ಆಕಾಂಕ್ಷಿಗಳ ವಯೋಮಿತಿಯೂ ಕೊನೆಗೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಪ್ರತಿಭಾವಂತ ಯುವಕರು ನೌಕರಿಯಿಂದ ವಂಚಿತರಾಗುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕೆಂದು ನಿರುದ್ಯೋಗಿ ಸಂಘಟನೆ ಯುವಕರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು.