ವಿಜಯಪುರ : ಜಿಲ್ಲೆಯ ಅಡವಿ ಸಂಗಾಪೂರ ಗ್ರಾಮದಲ್ಲಿರುವ ಗಾವಠಾಣ ಜಾಗದ ಪಹಣಿ ಪತ್ರ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಗ್ರಾಮದಲ್ಲಿರುವ ಗಾವಠಾಣ ಜಾಗದ ಪಹಣಿ ಪತ್ರ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ರೂ ಕೂಡ ಜಿಲ್ಲಾಧಿಕಾರಿ ಹೇಳುವವರೆಗೆ ಪಹಣಿ ನೀಡುವುದಿಲ್ಲ ಎಂದು ಪಿಡಿಒ ಹೇಳುತ್ತಿದ್ದಾರೆ.
ಹೀಗಾಗಿ 200ಕ್ಕೂ ಅಧಿಕ ಜನರಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಗ್ರಾಮ ಪಂಚಾಯತ್ ವತಿಯಿಂದ ಕೇವಲ ಕೈ ಬರಹದ ಪಹಣಿ ನೀಡಿದ್ದಾರೆ. ಇದನ್ನು ಗಣಕೀಕರಣ ಮಾಡಿ ನೀಡುವಂತೆ ಅರ್ಜಿ ಸಲ್ಲಿಸಿದರು.