ಮುದ್ದೇಬಿಹಾಳ(ವಿಜಯಪುರ): ಪ್ರಸ್ತುತ ರಾಜ್ಯದಲ್ಲಿ ಕೊರೊನಾ ನೆಪವೊಡ್ಡಿ ಪರೀಕ್ಷೆ ನಡೆಸುವ ಹಂತದಲ್ಲಿಯೇ ಶಾಲೆಗಳಲ್ಲಿ ತರಗತಿಗಳನ್ನು ನಡೆಸದಂತೆ ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆಯ ವಿರುದ್ಧ ಖಾಸಗಿ ಶಾಲಾ ಸಂಸ್ಥೆಯ ಒಕ್ಕೂಟ ಭಾರಿ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಸೋಮವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕರೆದಿದ್ದ ಖಾಸಗಿ ಶಾಲಾ ಮಂಡಳಿಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿರುವ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕೊಪ್ಪ ಅವರು, ಪರೀಕ್ಷೆಗಳನ್ನು ರದ್ದು ಮಾಡಿದ್ದರಿಂದ ಮಕ್ಕಳು ಹೊಲಗಳಲ್ಲಿ ಜೋಳ, ಗೋಧಿ ಬೆಳೆಯಲು ಹೋಗುವಂತಾಗಿದೆ.
ಅಲ್ಲದೇ ಕೆಲವು ಬಡವರ ಮಕ್ಕಳು ಕಟ್ಟಡದ ಕೆಲಸಗಳಿಗೆ ಹೋಗುತ್ತಿದ್ದಾರೆ. ದಯವಿಟ್ಟು ಈ ತಿಂಗಳು ಅಥವಾ ಮುಂದಿನ ತಿಂಗಳಾದರೂ ಪರೀಕ್ಷೆ ನಡೆಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಕೈಮುಗಿದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 8 ಮತ್ತು 9ರಂದು ಮುಖ್ಯಮಂತ್ರಿ ಬಿಎಸ್ವೈ ದಕ್ಷಿಣ ಕನ್ನಡ ಪ್ರವಾಸ