ETV Bharat / state

ಬಡತನದ ನೆಪವೊಡ್ಡಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು..

ಮುದ್ದೇಬಿಹಾಳದಲ್ಲಿ ನಮ್ಮೂರ ಗೆಳೆಯರ ಬಳಗದ ವತಿಯಿಂದ ಕೊರೊನಾ ವಾರಿಯರ್ಸ್​ಗಳ ಸನ್ಮಾನ, ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು..

muddhebihala
ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ
author img

By

Published : Oct 4, 2020, 9:09 PM IST

ಮುದ್ದೇಬಿಹಾಳ : ಬಡತನದ ನೆಪವೊಡ್ಡಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಹೇಳಿದರು. ಪಟ್ಟಣದ ಎಸ್ ಎಸ್ ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್ ಎನ್ ನಾಯಕ ಮಾತನಾಡಿ, ಬಡತನದಲ್ಲಿ ಹುಟ್ಟಿ ಬೆಳೆದು ಕಷ್ಟಪಟ್ಟು ಓದಿ ಇಂದು ಉನ್ನತ ಸ್ಥಾನದಲ್ಲಿರುವ ಕೆಬಿಎಂಪಿಎಸ್ ಶಾಲೆಯ 1985ನೇ ಬ್ಯಾಚ್​ನ ವಿದ್ಯಾರ್ಥಿಗಳು ಸಾಮಾಜಿಕವಾಗಿ ಉತ್ತಮ ಸಂದೇಶ ನೀಡುವ ಕಾರ್ಯ ಮಾಡುತ್ತಿರುವುದು ಖುಷಿಯ ಸಂಗತಿ.

ಹಿಂದುಳಿದ ವರ್ಗದಿಂದ ಬಂದ ನಮ್ಮಂಥವರಿಗೆ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಲು ಸಹಕಾರ ನೀಡಿದ ದಿ.ವೀರಭದ್ರಪ್ಪ ಸಿದ್ದಾಪೂರ ಅವರನ್ನು ಸ್ಮರಿಸುವುದಾಗಿ ಹೇಳಿದರು.

ನಮ್ಮೂರ ಗೆಳೆಯರ ಬಳಗದಿಂದ ಕೊರೊನಾ ವಾರಿಯರ್ಸ್​ಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನಂತರ ಕೊರೊನಾ ವಾರಿಯರ್ಸ್ ಹಾಗೂ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಮ್ಮೂರ ಗೆಳೆಯರ ಬಳಗದ ನೇತೃತ್ವದಲ್ಲಿ ಹಮ್ಮಿಕೊಂಡ ಕೊರೊನಾ ವಾರಿಯರ್ಸ್​ಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೆಬಿಎಂಪಿಎಸ್ ಶಾಲೆಯ ಮುಖ್ಯಶಿಕ್ಷಕ ಟಿ ಎನ್ ರೂಢಗಿ ಮಾತನಾಡಿ, 1980ರ ದಶಕದಲ್ಲಿ ಪಡೆದುಕೊಳ್ಳುತ್ತಿದ್ದ ಶಿಕ್ಷಣ ವ್ಯವಸ್ಥೆಯಲ್ಲಿ ಬಡತನ, ಸಿರಿತನ ಎಂಬುವುದಿರಲಿಲ್ಲ. ಈಗಿನಷ್ಟು ಆಧುನಿಕ ತಂತ್ರಜ್ಞಾನ ಮುಂದುವರೆದಿರಲಿಲ್ಲ. ಇದ್ದವರು ಇಲ್ಲದವರು ಎಂಬ ಭಾವನೆ ತೋರದೇ ಸಮಾನ ಶಿಕ್ಷಣ ದೊರೆಯುತ್ತಿತ್ತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.