ETV Bharat / state

SSLC EXAM: ಸಚಿವ ಸುರೇಶ್​ಕುಮಾರ್​ಗೆ ಥ್ಯಾಂಕ್ಸ್ ಹೇಳಿದ ವಿದ್ಯಾರ್ಥಿಗಳು

author img

By

Published : Jul 19, 2021, 5:29 PM IST

ಪ್ರಶ್ನೆ ಪತ್ರಿಕೆ ತುಂಬಾ ಸರಳವಾಗಿತ್ತು. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅತಿ ಸುಲಭವಾಗಿ ಪರೀಕ್ಷೆ ಎದುರಿಸುವಂತಾಗಿದೆ. ಇನ್ನಷ್ಟು ಕಠಿಣ ಪ್ರಶ್ನೆಗಳಿರಬೇಕಿತ್ತು ಎಂದು ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಚಿನ್ಮಯಿ ಬುಡ್ಡರ ಹಾಗೂ ಸಂದೀಪ ಬಡಿಗೇರ ಅಭಿಪ್ರಾಯಪಟ್ಟಿದ್ದಾರೆ.

student
ವಿದ್ಯಾರ್ಥಿನಿ

ಮುದ್ದೇಬಿಹಾಳ: ಕೊರೊನಾ ಪರಿಸ್ಥಿತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದರು. ಎಲ್ಲಿ ನಮ್ಮ ಪರೀಕ್ಷೆಗಳನ್ನು ರದ್ದು ಮಾಡುತ್ತಾರೋ ಎಂಬ ಭಯ ಇತ್ತು. ಆದರೆ, ಶಿಕ್ಷಣ ಸಚಿವರಾದ ಸುರೇಶ್​ ಕುಮಾರ್ ಅವರು ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಅವರಿಗೆ ಥ್ಯಾಂಕ್ಸ್ ಎಂದು ವಿದ್ಯಾರ್ಥಿನಿ ಶ್ರೇಯಾ ಕಿತ್ತೂರು ತಿಳಿಸಿದ್ದಾರೆ.

ಪಟ್ಟಣದ ಎಂ.ಜಿ.ಎo.ಕೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮುಗಿಸಿದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕೊರೊನಾ ಭೀತಿಯ ಮಧ್ಯೆಯೂ ಪರೀಕ್ಷೆ ಹೇಗೆ ಎಂಬ ಆತಂಕವನ್ನು ನಿವಾರಿಸಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಬರುತ್ತಲೇ ಮಾಸ್ಕ್, ಸ್ಯಾನಿಟೈಸರ್ ಹಾಕಿದರು. ಕೊಠಡಿಯಲ್ಲೂ ಸ್ಯಾನಿಟೈಸರ್ ಬಳಕೆ ಮಾಡಿದ್ದೇವೆ. ಧೈರ್ಯದಿಂದ ಪರೀಕ್ಷೆ ಎದುರಿಸಿದ್ದೇವೆ ಎಂದರು.

ಎಸ್​ಎಸ್​ಎಲ್​ಸಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ

ಇನ್ನಷ್ಟು ಕಠಿಣ ಪ್ರಶ್ನೆಗಳಿರಬೇಕಿತ್ತು: ಪ್ರಶ್ನೆ ಪತ್ರಿಕೆ ತುಂಬಾ ಸರಳವಾಗಿತ್ತು. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅತಿ ಸುಲಭವಾಗಿ ಪರೀಕ್ಷೆ ಎದುರಿಸುವಂತಾಗಿದೆ. ಇನ್ನಷ್ಟು ಕಠಿಣ ಪ್ರಶ್ನೆಗಳಿರಬೇಕಿತ್ತು ಎಂದು ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಚಿನ್ಮಯಿ ಬುಡ್ಡರ ಹಾಗೂ ಸಂದೀಪ ಬಡಿಗೇರ ಅಭಿಪ್ರಾಯಪಟ್ಟಿದ್ದಾರೆ.

ಖುಷಿಯನ್ನುಂಟು ಮಾಡಿದೆ: ವಿದ್ಯಾರ್ಥಿನಿ ಸ್ಪಂದನಾ ಮಾತನಾಡಿ, ಈ ಸಲ ಪರೀಕ್ಷೆ ಆಬ್ಜೆಕ್ಟಿವ್ ಟೈಪ್(ಬಹು ಆಯ್ಕೆ) ಮಾದರಿಯಲ್ಲಿದ್ದು, ಸರಳವಾಗಿತ್ತು. ಕೊರೊನಾ ಭೀತಿ ದೂರವಾಗಿದೆ. ಪರೀಕ್ಷೆ ಎದುರಿಸಿದ್ದು ಖುಷಿಯನ್ನುಂಟು ಮಾಡಿದೆ ಎಂದು ಹೇಳಿದರು.

ಆರ್​ಎಂಎಸ್​ಎ ಶಾಲೆಯ ವಿದ್ಯಾರ್ಥಿನಿ ಆಕಾಶ ಹಿರೇಮಠ ಮಾತನಾಡಿ, ಪರೀಕ್ಷೆಯನ್ನು ಸರಳವಾಗಿ ಎದುರಿಸಿದ್ದೇವೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದರು ಎಂದು ಹೇಳಿದರು.

ಎಲ್ಲವೂ ಸುಗಮವಾಗಿ ನಡೆದಿವೆ: ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಪ್ರಶ್ನೆ ಪತ್ರಿಕೆಗಳನ್ನು ಕೊಡುವುದಕ್ಕೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಲ್ಪ ವಿಳಂಬ ಹೊರತುಪಡಿಸಿದರೆ, ಎಲ್ಲವೂ ಸುಗಮವಾಗಿ ನಡೆದಿವೆ ಎಂದು ತಹಶೀಲ್ದಾರ್​ ಬಿ.ಎಸ್. ಕಡಕಭಾವಿ ತಿಳಿಸಿದ್ದಾರೆ.

ಬಿಇಓ ವೀರೇಶ ಜೇವರಗಿ, ನೋಡಲ್ ಅಧಿಕಾರಿ ಹೆಚ್.ಎ.ಮೇಟಿ ಮಾತನಾಡಿ, ಒಟ್ಟು 5429 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 5393 ಹಾಜರಾಗಿದ್ದಾರೆ. ಸುಮಾರು 36 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಥರ್ಮಲ್ ಸ್ಕ್ಯಾನ್​ ಮಾಡಿಸಿಕೊಂಡ ಅಧಿಕಾರಿಗಳು: ಪಟ್ಟಣದ ಅಂಜುಮನ್ ಹೈಸ್ಕೂಲ್‌ಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ, ಸಿಪಿಐ ಆನಂದ ವಾಘಮೋಡೆ, ಶಿಕ್ಷಣ ಸಂಯೋಜಕರಾದ ಆರ್.ಎಸ್.ದೊಡಮನಿ, ಪಿ.ಎ.ಮುಲ್ಲಾ, ಬಿಆರ್‌ಪಿ ಸಿದ್ದನಗೌಡ ಬಿಜ್ಜೂರ ಮೊದಲಾದವರು ಥರ್ಮಲ್ ಸ್ಕ್ಯಾನ್​ ಮಾಡಿಸಿಕೊಂಡರು. ನಂತರ ಸ್ಯಾನಿಟೈಸರ್ ಹಾಕಿಕೊಂಡೇ ಪರೀಕ್ಷಾ ಕೇಂದ್ರದೊಳಕ್ಕೆ ತೆರಳಿದರು.

ಓದಿ: ಚಿಕ್ಕೋಡಿ : ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ 462 ವಿದ್ಯಾರ್ಥಿಗಳು ಗೈರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.