ವಿಜಯಪುರ : ವಿಶ್ವದ ಎರಡು ರಾಷ್ಟ್ರಗಳಾದ ಇರಾನ್ ಮತ್ತು ಅಮೆರಿಕಕ್ಕೆ ಈ ಸಲ ಕೇಡುಗಾಲ (ಕೆಟ್ಟ ಕಾಲ) ಕಾದಿದೆ. ಪಕ್ಷ ಪಕ್ಷದೊಳಗೆ ಅಸೂಯೆ ಗಲಾಟೆ ಆಗುತ್ತವೆ. ರಾಜಕಾರಣಿಗಳು ಕೆಟ್ಟ ಫಲ ಅನುಭವಿಸುತ್ತಾರೆ ಎಂದು ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದದ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಸಿದ್ದರಾಮಯ್ಯ ಮುತ್ಯಾ (ಶ್ರೀಗಳು) ಕಾರ್ಣಿಕ ನುಡಿದಿದ್ದಾರೆ.
ಮಹಾಶಿವರಾತ್ರಿಯ ಅಮವಾಸ್ಯೆಯಿಂದ ಮೂರು ದಿನಗಳ ಕಾಲ ನಡೆಯುವ ಸದಾಶಿವ ಮುತ್ಯಾ ಜಾತ್ರೆ(ಮದ್ಯದ ಜಾತ್ರೆ)ಯ ಕೊನೆಯ ದಿನ ಸ್ವಾಮೀಜಿ ಸಿದ್ದರಾಮಯ್ಯ ಮುತ್ಯಾ ಕಾರ್ಣಿಕ ನುಡಿದಿದ್ದು, ರಾಜಕಾರಣಿಗಳಿಗೆ ಕೇಡುಗಾಲ ಬಂದಿದೆ. ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಸೂಚ್ಯವಾಗಿ ಭವಿಷ್ಯ ನುಡಿದಿದ್ದಾರೆ.
ಒಬ್ಬ ಗಣ್ಯ ವ್ಯಕ್ತಿಯ ಏರಿಳಿತನಾಗ್ತಾರೆ ಎನ್ನುವ ಮೂಲಕ ಪ್ರಸ್ತುತ ರಾಜ್ಯ ರಾಜಕಾರಣದ ಮುಂದಿನ ಪರಿಣಾಮವನ್ನು ಭವಿಷ್ಯದ ರೂಪದಲ್ಲಿ ಕಾರ್ಣಿಕ ನುಡಿದರು. ಅದು ಪಕ್ಷ ಇರಬಹುದು ಬೇರೇನು ಇರಬಹುದು ಎಂದು ಬಬಲಾದಿ ಮಠದ 2021ನೇ ಕಾಲ ಜ್ಞಾನದ ಭವಿಷ್ಯ ನುಡಿದರು.
ಅನ್ಯಕೋಮುಗಳ ನಡುವೆ ದಂಗೆಗಳು ಆಗ್ತವೆ. ಮುಂದಿನ ದಿನಗಳಲ್ಲಿ ಭೂಕಂಪನ ಆಗೋದು ಪಕ್ಕಾ. ಪಕ್ಕದ ತೆಲುಗು ರಾಜ್ಯಕ್ಕೆ ಗಂಡಾಂತರ ಕಾದಿದೆ. ತೆಲಗು ರಾಜ್ಯಕ್ಕೆ ಯುದ್ಧ ಭಯದ ಜತೆ ಕೇಡುಗಾಲ ಬರುವುದು ನಿಶ್ಚಿತ. ಮಳೆ ಬೆಳೆ ಸಮಾನಾಗಿ ಇದೆ ಎಂದಿದ್ದಾರೆ.
ಕಾಳು ಬೆಳೆಗಳ ಬೆಲೆ ಗಗನಕ್ಕೆ ಏರುತ್ತದೆ, ಏರಿಕೆ ಬಿಸಿ ಬೆನ್ನು ಬಿಡುವುದಿಲ್ಲ ಎನ್ನುವ ಮೂಲಕ ಈ ವರ್ಷವೋ ಜನ ನೆಮ್ಮದಿ ಜೀವನ ನಡೆಸುವುದು ಕಠಿಣ ಎನ್ನುವ ಭವಿಷ್ಯವನ್ನು ಬಬಲಾದ ಶ್ರೀಗಳು ಕಾರ್ಣಿಕ ನುಡಿದಿದ್ದಾರೆ.
ಇದನ್ನೂ ಓದಿ.. ಹಳೆಯ ಬ್ರಾಂಡ್‌ಗಳ ಮದ್ಯ ಲಭ್ಯವಾಗುವಂತೆ ಮಾಡಿ: ಮತಪೆಟ್ಟಿಗೆಯಲ್ಲಿ ಸಿಕ್ತು ಕುಡುಕನ ಮನವಿ ಪತ್ರ