ವಿಜಯಪುರ: ಜನರ ಭಾವನೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಸಂಸದ ಅನಂತಕುಮಾರ್ ಹೆಗಡೆ ಮಾತನಾಡಬೇಕು. ಅವರಿಗೆ ಇದೊಂದು ಕಪ್ಪು ಚುಕ್ಕೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ.
ಗಾಂಧೀಜಿ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ವಿಜಯಪುರದಲ್ಲಿ ಎಸ್.ಆರ್.ಹಿರೇಮಠ ಪ್ರತಿಕ್ರಿಯೆ ನೀಡಿ, ಹೆಗಡೆ ಇಷ್ಟು ಕೆಳಗೆ ಇಳಿದು ಮಾತಾಡ್ತಾರೆ ಅಂದುಕೊಂಡಿರಲಿಲ್ಲ. ಉದ್ಧಟನದಿಂದ ಹೆಗಡೆ ವರ್ತಿಸಿದ್ದಾರೆ. ಜನರು ಇದಕ್ಕೆ ಸ್ಪಷ್ಟವಾದ ಉತ್ತರ ಕೊಡಲಿದ್ದಾರೆ. ಅಜ್ಞಾನದಿಂದ ಬಂದ ಮಾತಿದು ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.