ಮುದ್ದೇಬಿಹಾಳ: ತಾಲೂಕಿನ ನಾಲತವಾಡ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ತೊಗರಿ ಹಾಗೂ ಹೆಸರು ಬಿತ್ತನೆ ಬೀಜವನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವಿತರಿಸಲಾಯಿತು.
ನಾಲತವಾಡ ರೈತ ಸಂಪರ್ಕ ಕೇಂದ್ರದ ಅಧಿಕಾರಿ ವೈ.ಬಿ. ಕ್ಷತ್ರಿ ಅವರು ಬಿತ್ತನೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಾಲತವಾಡ ಭಾಗದ 47 ಹಳ್ಳಿಗಳಿಗೆ ತೊಗರಿ ಹಾಗೂ ಹೆಸರು ಬೀಜ ವಿತರಣೆ ಮಾಡಲಾಗುವುದು. ಕಿಸಾನ್ ಯೋಜನೆಯಲ್ಲಿ ರೈತರು ದಾಖಲೆ ನೀಡಿದ್ದಾರೆ. ಇವರಿಗೆ ತೊಗರಿ, ಹೆಸರು ಬೀಜಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಪಾಲನೆಯೊಂದಿಗೆ ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಿ ಬರುವಂತೆ ತಿಳಿಸಿದರು.
ಈ ಸಂದರ್ಭ ಮುಖಂಡರಾದ ಎಂ. ಎಸ್ .ಪಾಟೀಲ,ಶಂಕರಾವ ದೇಶಮುಖ, ಗಂಗಣ್ಣ ಹಳಮನಿ, ಭೀಮಣ್ಣ ಗುರಿಕಾರ, ಮಹಾಂತಪ್ಪ ಗಾದಿ, ಬಾಬು ತೆಗ್ಗಿನಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.