ETV Bharat / state

ಹಿಮಾಲಯದಲ್ಲಿ ತೀವ್ರ ಚಳಿಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಯೋಧ ಸಾವು - ಪುಣೆಯ ಭಾರತೀಯ ಸೇನಾ ಆಸ್ಪತ್ರೆ

ಜಮ್ಮು ಕಾಶ್ಮೀರದ ಝಡಗಲ್ಲಿ ಪಾಯಿಂಟ್‌ನಲ್ಲಿ ಲಚ್ಯಾಣ ಗ್ರಾಮದ ಯೋಧ ರಾಜಶೇಖರ ಶರಣಪ್ಪ ಮುಜಗೊಂಡ ಅವರು ಸೇವೆ ಸಲ್ಲಿಸುತ್ತಿದ್ದಾಗ ತೀವ್ರ ಹಿಮಗಾಳಿಯ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

warrior Rajshekar Mujgund
ಯೋಧ ರಾಜಶೇಖರ ಮುಜಗೊಂಡ
author img

By

Published : Jul 7, 2023, 9:48 PM IST

ವಿಜಯಪುರ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇಂಡಿ ತಾಲೂಕು ಲಚ್ಯಾಣ ಗ್ರಾಮದ ಯೋಧ ರಾಜಶೇಖರ ಶರಣಪ್ಪ ಮುಜಗೊಂಡ (36)ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಪರಿಣಾಮ ಶುಕ್ರವಾರ ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ. ಜಮ್ಮು ಕಾಶ್ಮೀರದ ಝಡಗಲ್ಲಿ ಪಾಯಿಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತೀವ್ರ ಹಿಮದ ಚಳಿಯ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರು ಪುಣೆಯ ಭಾರತೀಯ ಸೇನಾ ಆಸ್ಪತ್ರೆಗೆ ದಾಖಲಾಗಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಪರಿಣಾಮ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದ ರಾಜಶೇಖರ 2010ರಲ್ಲಿ ಮದ್ರಾಸ್ ರೆಜಿಮೆಂಟ್‌ನಲ್ಲಿ ಸೇನೆಗೆ ಸೇರಿ ತರಬೇತಿ ಪಡೆದಿದ್ದರು. ತರಬೇತಿ ಮುಗಿಸಿ ಜಮ್ಮು ಕಾಶ್ಮೀರದ ಝಡಗಲ್ಲಿ ಪಾಯಿಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ತೀವ್ರ ಹಿಮಗಾಳಿಯ ಕಾರಣದಿಂದ ಅನಾರೋಗ್ಯ: ಅಲ್ಲಿ ತೀವ್ರ ಹಿಮಗಾಳಿ ಕಾರಣದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ರಜೆ ಪಡೆದು ಮನೆಗೆ ಬಂದು ಚೇತರಿಸಿ ಕೊಂಡಿದ್ದರು. ಮತ್ತೆ ದೇಶ ಸೇವೆಗೆ ಅಣಿಯಾಗಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಮಹಾರಾಷ್ಟ್ರದ ಪುಣೆಯ ಭಾರತೀಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಅವರು ಕೊನೆ ಉಸಿರೆಳೆದಿದ್ದಾರೆ.

ಇದನ್ನೂಓದಿ:ಪ್ರತ್ಯೇಕ ಘಟನೆಗಳಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಯೋಧರು ಸಾವು; ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಯೋಧನ ಅಗಲಿಕೆಯಿಂದ ಗ್ರಾಮದಲ್ಲಿ ಶೋಕದ ಮೌನ :ಯೋಧನ ಅಗಲಿಕೆಯಿಂದ ಅವರ ಕುಟುಂಬದಲ್ಲಿ ದುಃಖ ಮನೆ ಮಾಡಿದೆ. ಗ್ರಾಮದಲ್ಲಿ ಶೋಕದ ಮೌನ ಆವರಿಸಿದೆ. ರಾಜಶೇಖರ್ ಪಾರ್ಥಿವ ಶರೀರವನ್ನು ಪುಣೆಯಿಂದ ಸ್ವಗ್ರಾಮ ಲಚ್ಯಾಣಕ್ಕೆ ತಂದು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡುವ ಕುರಿತಾಗಿ ಕುಟುಂಬದ ಮೂಲಗಳು ಖಚಿತಪಡಿಸಿವೆ.

ಇನ್ನೊಬ್ಬ ಸಹೋದರ ದೇಶ ಸೇವೆಯಲ್ಲಿ: ಅಗಲಿದ ಯೋಧನ ಇನ್ನೊಬ್ಬ ಸಹೋದರ ಕೂಡ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಅಣ್ಣನ ದೇಶ ಸೇವೆಯನ್ನು ಕಂಡು ಆತನ ಅನುಕರಣೆಯಲ್ಲಿ ಬೆಳೆದ ರಾಜಶೇಖರ್​, ತಾನು ಕೂಡ ದೇಶ ಸೇವೆ ಮಾಡಬೇಕು ಎಂಬ ಹಂಬಲದೊಂದಿಗೆ ಸೇನೆಗೆ ಸೇರಿದ್ದರು. ಆದರೆ, ಅನಾರೋಗ್ಯಕ್ಕೆ ಒಳಗಾದ ವೀರಯೋಧ ಇನ್ನೇನು ಚೇತರಿಸಿಕೊಂಡು ದೇಶ ಸೇವೆಗೆ ಅಣಿಯಾಗುವ ವೇಳೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ಯೋಧನ ಅಂತ್ಯಕ್ರಿಯೆ: ಯೋಧನ ಅಂತ್ಯಕ್ರಿಯೆ ಜು. 8ರಂದು ಬೆಳಗ್ಗೆ 9ಕ್ಕೆ ಲಚ್ಯಾಣ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಬೆಳಗ್ಗೆ 8ಕ್ಕೆ ಗ್ರಾಮದಲ್ಲಿ ಯೋಧನ ಪ್ರಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸರ್ಕಾರಿ ಪ್ರೌಢಶಾಲಾ ಆವರಣಕ್ಕೆ ತರಲಾಗುವುದು. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂಓದಿ : ಬಜೆಟ್ ಅಧಿವೇಶನದಲ್ಲಿ‌ ಶಾಸಕಿಯ ಸ್ಥಾನದಲ್ಲಿ ಕುಳಿತ ಅನಾಮಿಕ : ಪೊಲೀಸ್ ಭದ್ರತಾ ವೈಫಲ್ಯವೇ..? ವರದಿ‌ ಕೇಳಿದ ಹೋಮ್ ಮಿನಿಸ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.