ETV Bharat / state

ನಾವ್ಯಾಕೆ ಪ್ರಾದೇಶಿಕ ಪಕ್ಷ ಮುಗಿಸೋಣ, ಅವರೇ ಮುಗಿದು ಹೋಗ್ತಾರೆ: ಹೆಚ್​ಡಿಡಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು - ಸಿದ್ದರಾಮಯ್ಯ ಲೇಟೆಸ್ಟ್​​ ವಿಜಯಪುರ ಭೇಟಿ

ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷ ಮುಗಿಸಲಾಗುತ್ತಿದೆ ಎಂಬ ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾವ್ಯಾಕೆ ಪ್ರಾದೇಶಿಕ ಪಕ್ಷ ಮುಗಿಸೋಣ, ಅವರೇ ತಮ್ಮ ನಡವಳಿಕೆಗ‌‌ಳಿಂದ ತತ್ವ ಸಿದ್ಧಾಂತಗಳಿಂದ ಮುಗಿದು ಹೋಗ್ತಾರೆ ಎಂದಿದ್ದಾರೆ.

siddaramaiah reaction  for devegowda statement
ದೇವೇಗೌಡರ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ
author img

By

Published : Oct 25, 2021, 3:03 PM IST

ವಿಜಯಪುರ:ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷ ಮುಗಿಸಲಾಗುತ್ತಿದೆ ಎಂಬ ದೇವೇಗೌಡರ ಆರೋಪ‌ದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಾವ್ಯಾಕೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸೋಣ? ಅವರ ನಡವಳಿಕೆಗ‌‌ಳಿಂದ ತತ್ವ ಸಿದ್ಧಾಂತಗಳಿಂದ ಅವರೇ ಮುಗಿದು ಹೋಗ್ತಾರೆ ಎಂದರು.

ದೇವೇಗೌಡರ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಚುನಾವಣೆ ಇದ್ದಾಗ ಅವರ ವಿರುದ್ಧ ಪ್ರಚಾರ ಮಾಡಲೇಬೇಕು. ಪ್ರಚಾರ ಮಾಡುತ್ತೇವೆ, ಜೆಡಿಎಸ್ ಸೋಲುತ್ತದೆ ಅಷ್ಟೇ. ಮುಗಿಸಲು ಬಿಡುವುದಿಲ್ಲ ಎನ್ನುವುದಾದರೆ ಅವರೇ ಇಟ್ಟುಕೊಳ್ಳಲಿ ನಾವೇನೂ ಬೇಡ ಎನ್ನುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ದೇವೇಗೌಡರೂ ಸಹ ಕಾಂಗ್ರೆಸ್​ನಲ್ಲಿದ್ದವರು, ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಜನರ ನಂಬಿಕೆಗೆ ಅರ್ಹ ಅಲ್ಲ ಎಂದರು. ಇನ್ನೇನು ಜೆಡಿಎಸ್ ಸ್ವಾತಂತ್ರ್ಯ ತಂದು ಕೊಟ್ಟಿದೆಯಾ? ಎಂದು ಪ್ರಶ್ನಿಸಿದರು.

ಕಂಬಳಿ ಬಗ್ಗೆ ಸಿಎಂ ಹೇಳಿಕೆ‌ಗೆ ತಿರುಗೇಟು:

ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಬೇಕು ಎಂದಿದ್ದ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಏನ್ ಕಂಬಳಿ? ಅವನು ಕುರುಬರಲ್ಲಿ ಹುಟ್ಟಿದ್ದಾನಾ?, ನಾನು ಕುರುಬರ ಜಾತಿಯಲ್ಲಿ ಹುಟ್ಟಿದ್ದೇನೆ ಎಂದು ಸಿದ್ಧರಾಮಯ್ಯ ಪ್ರತ್ಯುತ್ತರ ನೀಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.