ವಿಜಯಪುರ: ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ತೈಲ ನಿಕ್ಷೇಪ ಹುಡುಕಲಾಗುತ್ತಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಣೂರು, ಆಲಮಟ್ಟಿ ಹಾಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ, ಇಳಕಲ್, ಗುಡೂರು ಸೇರಿದಂತೆ ಹತ್ತಾರು ಕಡೆಗಳಲ್ಲಿ ನಿಕ್ಷೇಪಕ್ಕಾಗಿ ಶೋಧ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರ ONGC ಎಂಬ ಆಂಧ್ರ ಮೂಲದ ಖಾಸಗಿ ಏಜೆನ್ಸಿಗೆ ನಿಕ್ಷೇಪ ಹುಡುಕಾಟ ಮಾಡುವಂತೆ ಸೂಚಿಸಿದೆಯಂತೆ. ಈ ಭಾಗದಲ್ಲಿ ಪೆಟ್ರೋಲ್, ಡಿಸೇಲ್, ಸೀಮೆ ಎಣ್ಣೆ ಹಾಗೂ ಗ್ಯಾಸ್ ತೈಲಗಳ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆಯಂತೆ. ಭೂಮಿಯ ಆಳದಲ್ಲಿ ಅಲ್ಲಲ್ಲಿ 80 ಅಡಿಯಷ್ಟು ಕೊಳವೆ ಕೊರೆದು, ಅದರಲ್ಲಿ ಯಂತ್ರ ಇಳಿಸಿ ತಪಾಸಣೆ ನಡೆಸಲಾಗುತ್ತಿದೆ. ಒಂದು ವಾರಗಳ ಕಾಲ ವಿವಿಧ ಕಡೆ ಸಂಶೋಧನೆ ನಡೆಸಿ ಏಜೆನ್ಸಿಗೆ ವರದಿ ಒಪ್ಪಿಸಲಾಗಿದೆ.