ವಿಜಯಪುರ: ಲಾರಿಗೆ ಹಿಂಬದಿಯಿಂದ ಶಾಲಾ ವಾಹನ ಡಿಕ್ಕಿಯಾಗಿ ಶಾಲಾ ವಾಹನದಲ್ಲಿದ್ದ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ನಿಡಗುಂದಿ ತಾಲೂಕಿನ ಉಣ್ಣಿಬಾವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮುದ್ದೇಬಿಹಾಳದ ಜ್ಞಾನಭಾರತಿ ಶಾಲೆಗೆ ಸೇರಿದ ಶಾಲಾ ವಾಹನ ಇದಾಗಿದ್ದು, ವಿಜಯಪುರಕ್ಕೆ ಹೊರಟಿತ್ತು ಎಂಬ ಮಾಹಿತಿ ದೊರೆತಿದೆ.
ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.