ಮುದ್ದೇಬಿಹಾಳ: ಹೊಸ ಪ್ರತಿಭೆಗಳನ್ನಿಟ್ಟುಕೊಂಡು ಅನ್ನದಾತನ ಸಂಕಷ್ಟವನ್ನು ಕಿರುಚಿತ್ರದ ಮೂಲಕ ತೋರಿಸಲು ಮುಂದಾಗಿರುವ ಯುವಕರ ಕಾರ್ಯ ಶ್ಲಾಘನೀಯವಾದದು ಎಂದು ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಬಿ.ಚಲವಾದಿ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಣರಂಗ ಕಿರುಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲ ಒಂದು ಹೊತ್ತಿನ ಊಟ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ರೈತರು ಬೆವರು ಬಸಿದು ಬೆಳೆದ ಶ್ರಮವೇ ಕಾರಣ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪೂರ ಮಾತನಾಡಿ, ಹಿರಿತೆರೆ, ಕಿರುತೆರೆಯಲ್ಲಿ ಉತ್ತರ ಕರ್ನಾಟಕ ಕಲಾವಿದರಿಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದ್ದು ಅದನ್ನು ಹೋಗಲಾಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಈ ವೇಳೆ ಚಿತ್ರದ ನಿರ್ದೇಶಕರ ದೊಡ್ಡಬಸಯ್ಯ ಹಿರೇಮಠ, ಸಾಹಿತಿ ಶಿವಪುತ್ರ ಅಜಮನಿ, ಕಲಾವಿದ ಶ್ರೀಶೈಲ ಹೂಗಾರ ಸೇರಿದಂತೆ ಹಲವರು ಇದ್ದರು.