ವಿಜಯಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧ ಸ್ವಗ್ರಾಮಕ್ಕೆ ಆಗಮಿಸಿದ ಕಾರಣ ಜಿಲ್ಲೆಯ ಬಸವನ ಬಾಗೇವಾಡಿ ನಿವಾಸಿಗಳು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಪರಶುರಾಮ ಬಸಪ್ಪ ಕಂದಗಲ್ಲ 1994ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಕಾರ್ಗಿಲ್ ಯುದ್ಧ ವೇಳೆ ಅವರು ಪಂಜಾಬಿನ ಲೇಲ್ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು. ಸುಮಾರು 26 ವರ್ಷಗಳ ಕಾಲ ಯೋಧರಾಗಿ ಕರ್ತವ್ಯ ನಿರ್ವಹಿಸಿ ನಂತರ 2020ರ ಡಿಸೆಂಬರ್ 31ರಂದು ನಿವೃತ್ತರಾದ ಹಿನ್ನೆಲೆ ಇಂದು ಸ್ವ ಗ್ರಾಮಕ್ಕೆ ವಾಪಸ್ ಆಗುತ್ತಿರುವ ಮಾಹಿತಿ ಪಡೆದುಕೊಂಡಿದ್ದ ನಿವೃತ್ತ ಯೋಧರ ಸಂಘದ ಸದಸ್ಯರು ಹಾಗೂ ಪಟ್ಟಣದ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು.
ಓದಿ: ಡಿವಿಎಸ್ ಆರೋಗ್ಯ ಸಹಜವಾಗಿದೆ, 24 ಗಂಟೆ ನಿಗಾದಲ್ಲಿರಿಸಿ ನಂತರ ಡಿಸ್ಚಾರ್ಜ್: ಡಾ.ಬೃಂದಾ
ಮೆರವಣಿಗೆ ಮೂಲಕ ಭರ್ಜರಿಯಾಗಿ ಬರ ಮಾಡಿಕೊಂಡ ನಂತರ ಸನ್ಮಾನ ಸಮಾರಂಭ ಆಯೋಜಿಸಿದ್ದರು. ನಿವೃತ್ತ ಯೋಧ ಪರಶುರಾಮ ಕಂದಗಲ್ಲ ಹಾಗೂ ಅವರ ಕುಟುಂಬ ವರ್ಗದವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.