ಮುದ್ದೇಬಿಹಾಳ: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಮನಿಯಾರ ಫೌಂಡೇಷನ್ ಸಂಚಾಲಕ ಅಯ್ಯೂಬ ಮನಿಯಾರ್ ಹೇಳಿದರು.
ಪಟ್ಟಣದ ಹುಡ್ಕೋದಲ್ಲಿ 200 ಬಡ ಮಹಿಳೆಯರಿಗೆ ರಂಜಾನ್ ಹಬ್ಬದಾಚರಣೆಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ತಂದೆ-ತಾಯಿ ಸ್ಮರಣಾರ್ಥ ಪ್ರತಿ ವರ್ಷ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದರು.
ಕಿಟ್‌ನಲ್ಲಿ ಶಾವಿಗೆ, ಸೀರೆ, ಒಂದು ಕೆಜಿ ಸಕ್ಕರೆ, ಅಕ್ಕಿ, ಮಸಾಲೆ ಪದಾರ್ಥ ಒಳಗೊಂಡಿದೆ. ಅಂದಾಜು 500 ರೂ. ಒಂದು ಕಿಟ್‌ಗೆ ತಗುಲಿದೆ. ಈ ಸೇವೆಯಲ್ಲಿ 20 ವರ್ಷಗಳಿಂದ ತೊಡಗಿಸಿಕೊಂಡು ಬಕರುತ್ತಿದ್ದೇನೆ. ನನ್ನ ತಂದೆ-ತಾಯಿಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಈ ಸೇವೆ ಮಾಡುತ್ತಿದ್ದೇನೆ ಎಂದು ಅಯ್ಯೂಬ ಹೇಳಿದರು.