ETV Bharat / state

ರಮೇಶ್ ಜಾರಕಿಹೊಳಿ-ಬಸನಗೌಡ ಪಾಟೀಲ ಯತ್ನಾಳ್ ರಹಸ್ಯ ಮಾತುಕತೆ - Ramesh Jarkiholi latest news

ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಸಹ ಸಚಿವ ಸ್ಥಾನದ ರೇಸ್​ನಲ್ಲಿದ್ದಾರೆ. ಈ ನಡುವೆ ರಮೇಶ್​​ ಜಾರಕಿಹೊಳಿ ಸಹ ಸಚಿವ ಸ್ಥಾನಕ್ಕಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಇವರ ರಹಸ್ಯ ಭೇಟಿಯಲ್ಲಿ ನಡೆದ ಮಾತುಕತೆ ಮಾತ್ರ ಬಹಿರಂಗಗೊಂಡಿಲ್ಲ..

Ramesh Jarkiholi  meets MLA basanagowda patil Yatnal
ಮಾಜಿ ಸಚಿವ ರಮೇಶ್​ ಜಾರಕಿಹೊಳಿ
author img

By

Published : Nov 14, 2021, 6:45 PM IST

ವಿಜಯಪುರ : ಮಾಜಿ ಸಚಿವ ರಮೇಶ್​ ಜಾರಕಿಹೊಳಿ(Ramesh Jarkiholi) ಇಂದು ಸಂಜೆ ವಿಜಯಪುರಕ್ಕೆ ಆಗಮಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​(MLA basanagowda patil Yatnal) ಅವರ ಹೊರವಲಯದ ತೋಟದ ನಿವಾಸಕ್ಕೆ ತೆರಳಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಲೈಂಗಿಕ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್​ ಜಾರಕಿಹೊಳಿ ಈಗ ಮತ್ತೊಮ್ಮೆ ಸಚಿವ ಸ್ಥಾನಕ್ಕೆ ಎಲ್ಲಿಲ್ಲದ ಕಸರಸ್ತು ನಡೆಸುತ್ತಿರುವ ಬೆನ್ನಲ್ಲೆ ಯತ್ನಾಳ್​​ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

Ramesh Jarkiholi  meets MLA basanagowda patil Yatnal
ಯತ್ನಾಳ್ ಭೇಟಿಯಾದ ಜಾರಕಿಹೊಳಿ

ಸುಮಾರು 1 ಗಂಟೆಗಳ ಕಾಲ ರಹಸ್ಯ ಮಾತುಕತೆ(Secret talks)ನಡೆಸಿದ್ದಾರೆ ಎನ್ನಲಾಗಿದೆ. ಮಾಧ್ಯಮದವರ ಕಣ್ಣು ತಪ್ಪಿಸಿ ಬಸನಗೌಡ ಪಾಟೀಲ ಯತ್ನಾಳ್​​ ಅವರ ತೋಟದ ನಿವಾಸದಲ್ಲಿ ಭೇಟಿಯಾಗಿರುವುದು ಬಿಜೆಪಿ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ರಮೇಶ್​ ಜಾರಕಿಹೊಳಿ ಹಾಗೂ ಯತ್ನಾಳ್​ ರಹಸ್ಯ ಮಾತುಕತೆ

ಬಿಟ್​ ಕಾಯಿನ್​ ಹಗರಣದಲ್ಲಿ(bitcoin scam)ಸರ್ಕಾರ ಹಾಗೂ ವಿರೋಧ ಪಕ್ಷಗಳ ಮಧ್ಯೆ ಆರೋಪ-ಪ್ರತ್ಯಾರೋಪ ನಡೆಯುತ್ತಿವೆ. ಇತ್ತ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಆದರೆ, ಶೆಟ್ಟರ್ ಮಾತ್ರ ಇದು ಖಾಸಗಿ ಭೇಟಿ ಎಂದು ಹೇಳುತ್ತಿದ್ದರೂ, ಸದ್ಯದ ರಾಜಕೀಯ ಬೆಳವಣಿಗೆ ಇವರ ಭೇಟಿಗೆ ಬೇರೆ ಅರ್ಥ ಕಲ್ಪಿಸುತ್ತಿದೆ.

ಇತ್ತ ವಿಜಯಪುರದಲ್ಲಿ ಬಸನಗೌಡ ಪಾಟೀಲ ಯತ್ನಾಳ್​​ ಅವರು ರಮೇಶ್​ ಜಾರಕಿಹೊಳಿ ಭೇಟಿಯಾಗಿರುವುದು ಸೇರಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಕಳೆದ ನಾಲ್ಕೈದು ದಿನಗಳ ಬೆಳವಣಿಗೆ ಸಾರಿ ಹೇಳುತ್ತಿದೆ.

ಯತ್ನಾಳ್​ ಭೇಟಿಯಾದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಸಹ ಸಚಿವ ಸ್ಥಾನದ ರೇಸ್​ನಲ್ಲಿದ್ದಾರೆ. ಈ ನಡುವೆ ರಮೇಶ್​​ ಜಾರಕಿಹೊಳಿ ಸಹ ಸಚಿವ ಸ್ಥಾನಕ್ಕಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಇವರ ರಹಸ್ಯ ಭೇಟಿಯಲ್ಲಿ ನಡೆದ ಮಾತುಕತೆ ಮಾತ್ರ ಬಹಿರಂಗಗೊಂಡಿಲ್ಲ.

ಮಾತುಕತೆ ನಂತರ ರಮೇಶ್​​ ಜಾರಕಿಹೊಳಿ ನೇರ ಬೆಳಗಾವಿಗೆ ತೆರಳಿದರೆ, ಬಸನಗೌಡ ಪಾಟೀಲ ಯತ್ನಾಳ್​​ ಸಿಂದಗಿಯಲ್ಲಿ ನಡೆಯುತ್ತಿರುವ ಅಭಿನಂದನಾ ಸಭೆಯಲ್ಲಿ ಭಾಗವಹಿಸಲು ತೆರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.