ವಿಜಯಪುರ: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದವಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ವಿಜಯಪುರದ ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಸೋನಾಲಿ ದೇವಾನಂದ ರಾಠೋಡ ಅವಳಿ ಚಿನ್ನದ ಪದಕ ಪಡೆದುಕೊಂಡು ಸಾಧನೆ ಮೆರೆದಿದ್ದಾಳೆ.
ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸದಲ್ಲಿ ಸೋನಾಲಿ ಬಿ.ಎಸ್.ಸಿ ನರ್ಸಿಂಗ್ ದ್ವಿತೀಯ ಹಾಗೂ ಬಿ.ಎಸ್.ಸಿ ನರ್ಸಿಂಗ್ ತೃತೀಯ ವರ್ಷ ಎರಡು ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದು, ರಾಷ್ಟ್ರಪತಿಗಳಿಂದಲೇ ನೇರವಾಗಿ ಈ ಪದಕ ಪಡೆದುಕೊಂಡಿದ್ದಾಳೆ. ಪ್ರಾಚಾರ್ಯ ಶೋಲ್ಮೊನ್ ಚೋಪಡೆ ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯ ಕುಲಾಧಿಪತಿ ವಜುಭಾಯ್ ವಾಲಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಉಪಸ್ಥಿತರಿದ್ದರು.
ಬಡ ಕೂಲಿಕಾರನ ಮಗಳಾಗಿರುವ ಸೋನಾಲಿ ನರ್ಸಿಂಗ್ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಷ್ಟ್ರಪತಿಗಳಿಂದ ಘಟಿಕೋತ್ಸದವಲ್ಲಿ ಚಿನ್ನದ ಪದಕ ಪಡೆದಿದ್ದಕ್ಕೆ ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ವಿದ್ಯಾರ್ಥಿನಿ ಸೋನಾಲಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.