ತುಮಕೂರು: ಪುನೀತ್ ರಾಜಕುಮಾರ್ ಕೊನೆ ಸಿನಿಮಾ ಜೇಮ್ಸ್ ಎಲ್ಲೆಡೆ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ನಗರದ ವಿವಿಧ ಚಿತ್ರಮಂದಿರಗಳ ಆವರಣದಲ್ಲಿ ಪುನೀತ್ ಕಟೌಟ್ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ, ಕೇಸ್ ಕತ್ತರಿಸಿ ಗೌರವಿಸಿದರು. ಇದೇ ವೇಳೆ ತಿಪಟೂರಿನಲ್ಲಿ ಪುಟ್ಟ ಬಾಲಕನಿಗೆ ಜೇಮ್ಸ್ ಚಿತ್ರದಲ್ಲಿ ಪುನೀತ್ ತೊಟ್ಟಿರುವ ಉಡುಗೆಯ ರೀತಿಯ ಉಡುಪನ್ನು ಹಾಕಿಸಿ ಮೆರವಣಿಗೆ ಮಾಡಲಾಯಿತು.ಇನ್ನೊಂದೆಡೆ ತುಮಕೂರು ನಗರದ ವಿವಿಧೆಡೆ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಉಚಿತ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಿಜಯಪುರದಲ್ಲೂ ಜೇಮ್ಸ್ ಜಾತ್ರೆ:
ವಿಜಯನಗರದಲ್ಲಿ ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ಭರ್ಜರಿಯಾಗಿ ಬರಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಡ್ರೀಮ್ಲ್ಯಾಂಡ್ ಹಾಗೂ ಲಕ್ಷ್ಮಿ ಚಿತ್ರಮಂದಿರಗಳ ಆವರಣಗಳಲ್ಲಿ ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಇದೇ ವೇಳೆ ರಕ್ತದಾನ, ನೇತ್ರದಾನ ಶಿಬಿರ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಫಿಲ್ಮ್ ಸಿಟಿಗೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟರೆ ಸಂತಸ: ಶಿವರಾಜ್ ಕುಮಾರ್