ETV Bharat / state

ವೈದ್ಯರ ವಿರುದ್ಧ ಕೊರೊನಾ ಪೀಡಿತ ಮೃತನ ಸಂಬಂಧಿಕರ ಪ್ರತಿಭಟನೆ: ಫೇಸ್​​​ಬುಕ್​​ನಲ್ಲಿ ವೈದ್ಯರ ಆಕ್ರೋಶ - Vijayapura Latest News

ಪ್ರತಿಭಟನೆಯಲ್ಲಿ ಮೃತನ ಸಂಬಂಧಿಕರು, ರಾಜಕೀಯ ಮುಖಂಡರು ಭಾಗಿ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನಾಕಾರರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಫೇಸ್​​​​ಬುಕ್ ಪೋಸ್ಟ್ ಮಾಡಿದ್ದಾರೆ.

Protest in front of hospital Doctor Outrage on Facebook
ಫೇಸ್​​​ಬುಕ್​​ನಲ್ಲಿ ವೈದ್ಯನ ಆಕ್ರೋಶ
author img

By

Published : Sep 30, 2020, 9:45 AM IST

ವಿಜಯಪುರ: ಕೊರೊನಾದಿಂದ ಮೃತಪಟ್ಟಿದ್ದ ವ್ಯಕ್ತಿಯ ಶವ ನೀಡುವಂತೆ ಒತ್ತಾಯಿಸಿ ಇತ್ತೀಚೆಗೆ ಖಾಸಗಿ ಆಸ್ಪತ್ರೆ ಎದುರು ನಡೆದ ಪ್ರತಿಭಟನೆ ಪ್ರಕರಣ ಈಗ ಫೇಸ್​​​ಬುಕ್ ಹೋರಾಟಕ್ಕೆ ನಾಂದಿ ಹಾಡಿದೆ.

ಪ್ರತಿಭಟನೆಯಲ್ಲಿ ಮೃತನ ಸಂಬಂಧಿಕರು, ರಾಜಕೀಯ ಮುಖಂಡರು ಭಾಗಿ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನಾಕಾರರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಫೇಸ್​​ಬುಕ್ ಪೋಸ್ಟ್ ಮಾಡಿದ್ದಾರೆ.

ಅಗತ್ಯ ಕ್ರಮ ಕೈಗೊಳ್ಳದೆ ಹೊದರೆ ಉಪವಾಸ ಸತ್ಯಾಗ್ರಹ ಮಾಡುವದಾಗಿ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆ ವೈದ್ಯ ತಮ್ಮಾರಾವ ಪಾಟೀಲ್​​ ಎಂಬುವರಿಂದ ಫೇಸ್​​​ಬುಕ್ ಪೋಸ್ಟ್ ಮಾಡಲಾಗಿದೆ.

ನಾವು ಪ್ರಕರಣ ದಾಖಲಿಸಿ ನ್ಯಾಯ ಕೋರಿದಾಗ, ಕೋವಿಡ್ ವೈದ್ಯರ ವಿರುದ್ಧ ನಕಲಿ ದೌರ್ಜನ್ಯ ಕೌಂಟರ್ ಪ್ರಕರಣ ದಾಖಲಿಸಲಾಗುತ್ತದೆ. ಪ್ರತಿಭಟನೆ ಮಾಡಿದ ಜನರನ್ನು ಬಂಧಿಸಲಾಗುತ್ತಿಲ್ಲ. ಆದರೆ ಕೋವಿಡ್ ವೈದ್ಯರನ್ನು ಬಂಧಿಸಲಾಗುತ್ತಿದೆ ಎಂದು ಪೋಸ್ಟ್​​​ನಲ್ಲಿ ಬರೆದುಕೊಂಡಿದ್ದಾರೆ. ಕರ್ನಾಟಕದ ವೈದ್ಯರಿಗೆ ಇದು ಎಷ್ಟು ಗೊಂದಲ ಮತ್ತು ಖಿನ್ನತೆಯನ್ನು ನೀಡುತ್ತದೆ ಎಂದು ಬೇಸರ ತೋಡಿಕೊಂಡಿದ್ದಾರೆ.

ನನಗೆ ಬೆಂಬಲ ನೀಡಿ, ಸಂದೇಶವನ್ನು ಹಂಚಿಕೊಳ್ಳಿ. ಕೇಂದ್ರ ಮತ್ತು ರಾಜ್ಯದ ಮಂತ್ರಿಗಳನ್ನು ಟ್ಯಾಗ್ ಮಾಡಲು ಪ್ರಯತ್ನಿಸಿ, ಭರವಸೆಯಂತೆ ಯಾವುದೇ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ ನಾನು ಉಪವಾಸವನ್ನು ಪುನರಾರಂಭಿಸುತ್ತೇನೆ ಎಂದು ತಮ್ಮ ಫೇಸ್​​​ಬುಕ್ ಅಕೌಂಟ್​​ನಲ್ಲಿ ಬರೆದುಕೊಂಡಿದ್ದಾರೆ. ವೈದ್ಯನ ಪೋಸ್ಟ್​​​ಗೆ ಹಲವು ವೈದ್ಯರು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.