ETV Bharat / state

ಸಾವರ್ಕರ್​, ಗೋಡ್ಸೆ ವಿರುದ್ಧದ ಬರವಣಿಗೆ ವಿರೋಧಿಸಿ ಪ್ರತಿಭಟನೆ - ಹಿಂದೂ ಜನಜಾಗೃತಿ ಸಮಿತಿ

ಕಾಂಗ್ರೆಸ್​ ಸೇವಾದಳ ತರಬೇತಿಯಲ್ಲಿ ಸಾವರ್ಕರ್​ ಬಗ್ಗೆ ಅವಹೇಳನಕಾರಿಯಾಗಿ ಬರೆದ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದೂ ಜನಜಾಗೃತ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Protest by Hindu Janjagrati Committee in vijayapur
ಸಾವರ್ಕರ್​, ಗೋಡ್ಸೆ ಸಲಿಂಗಕಾಮಿಗಳು ಎಂಬ ಬರವಣಿಗೆ ವಿರುದ್ಧ ಪ್ರತಿಭಟನೆ
author img

By

Published : Jan 7, 2020, 3:19 PM IST

ವಿಜಯಪುರ: ವೀರ ಸಾವರ್ಕರ್​ ವಿರುದ್ಧ ಅವಹೇಳನಕಾರಿ ಪುಸ್ತಕ ಪ್ರಕಟಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇಂದು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿ, ಮನವಿಪತ್ರ ಸಲ್ಲಿಸಲಾಯಿತು.

ಸಾವರ್ಕರ್​, ಗೋಡ್ಸೆ ಸಲಿಂಗಕಾಮಿಗಳು ಎಂಬ ಬರವಣಿಗೆ ವಿರುದ್ಧ ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಿಂದೂ ಜನ‌ ಜಾಗೃತಿ ಕಾರ್ಯಕರ್ತರು, ಮಧ್ಯಪ್ರದೇಶ ರಾಜ್ಯದ ಭೋಪಾಲ್‌ದಲ್ಲಿ ಕಾಂಗ್ರೆಸ್​ ನಡೆಸಿದ ಸೇವಾದಳದ ತರಬೇತಿ ಶಿಬಿರದಲ್ಲಿ ವೀರ ಸಾವರ್ಕರ್​ ಹಾಗೂ ನಾಥೂರಾಮ್​ ಗೋಡ್ಸೆ ಸಲಿಂಗ ಕಾಮಿಗಳಾಗಿದ್ದರು, ಅಲ್ಪ ಸಂಖ್ಯಾತರ ಮೇಲೆ ಅತ್ಯಾಚಾರ ಎಸಗುತ್ತಿದ್ದರು ಎಂದು ಸುಳ್ಳು ಬರವಣಿಗೆಗಳನ್ನು ಪ್ರಕಟಿಸಿದೆ. ಇದು ದೇಶಕ್ಕಾಗಿ ಹೋರಾಡಿದವರಿಗೆ ಮಾಡುವ ಅವಮಾನ ಇದು ಎಂದು ದೂರಿದರು.

ಅಶ್ಲೀಲವಾಗಿ ಪುಸ್ತಕ ಬರೆದ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದಕ್ಕೆ ಮನವಿ ಸಲ್ಲಿಸಲಾಯಿತು.

Intro:ವಿಜಯಪುರ: ಭೋಪಾಲ್‌ದ ಕಾಂಗ್ರೆಸ್ ಸೇವಾದಲದ ತರಬೇತಿ ಶಿಬಿರದಲ್ಲಿ ಸಾವರ್ಕರ್ ವಿರುದ್ದ ಅವಹೇಳನಕಾರಿ‌ ಪುಸ್ತಕ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನ ಜಾಗೃತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Body:ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ ಹಿಂದೂ ಜನ‌ ಜಾಗೃತಿ ಕಾರ್ಯಕರ್ತರು ಕಾಂಗ್ರೆಸ್ ಸೇವಾದಲ ತರಬೇತಿಯಲ್ಲಿ ದೇಶದ ಕ್ರಾಂತಿಕಾರಿ ವೀರ ಸಾವರ್ಕರ್ ಬಗ್ಗೆ ಬಹಳ ಹಗುರವಾಗಿ ಪುಸ್ತಕ ಪ್ರಕಟಿಸಿದೆ. ದೇಶದ ಕ್ರಾಂತಿಕಾರಿಗಳು ಸಲಿಂಗ ಸಂಬಂಧ ಹೊಂದಿದವಾಗಿದ್ದರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿ ಮಸೀದಿ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು ಎಂದು ಕಾಂತ್ರಿಕಾರಿಗಳ ಚಾರಿತ್ಯವನ್ನು ಟೀಕಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ಕಿಡಿ‌ಕಾರಿದರು.

Conclusion:ಅಶ್ಲೀಲವಾಗಿ ಪುಸ್ತಕ ಬರೆಯಲು ಕಾರಣವಾಗ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಜನ ಜಾಗೃತಿ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು.. ‌

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.