ETV Bharat / state

ಜಿಲ್ಲಾಸ್ಪತ್ರೆಯಲ್ಲಿ ಬೆತ್ತಲೆ ಬಿದ್ದಿದ್ದ ರೋಗಿ ಸಾವು: 8 ಸಿಬ್ಬಂದಿಗೆ ನೋಟಿಸ್

author img

By

Published : Nov 20, 2019, 5:25 PM IST

ವಿಜಯಪುರ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿ ರವಿ ಪಾಟೀಲ್​ ಎಂಬಾತನು ಸಾವನಪ್ಪಿದ್ದಾನೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆಗಳು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಮೃತ ರವಿ ಪಾಟೀಲ

ವಿಜಯಪುರ: ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರವಿ ಪಾಟೀಲ್​​ ಎಂಬಾತನು ಸಿಬ್ಬಂದಿ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಸ್ಪತ್ರೆ ಎದುರು ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ರೋಗಿಯನ್ನು 108 ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇಂದು (ನ.20) ಬೆಳಗ್ಗೆ ರೋಗಿ ರವಿ ಪಾಟೀಲ್​ ಅಸುನೀಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಶರಣಪ್ಪ ಕಟ್ಟಿ 7 ಜನ ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಾರ್ಡ್ ನಂ 230ರ ಭದ್ರತಾ ಸಿಬ್ಬಂದಿ ಅಮಾನತು ಮಾಡಲಾಗಿದೆ ಎಂದು ಹೇಳಿದರು.

ರೋಗಿಯು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎನ್ನಲಾಗಿದೆ. ವಾರ್ಡ್​ಗೆ ಭೇಟಿ ನೀಡಿದ ವೇಳೆ ಮೈ ಮೇಲಿನ ಬಟ್ಟೆಗಳನ್ನು ತೆಗೆದು ಹಾಕುತ್ತಿದ್ದ. ಮೃತ ದೇಹವನ್ನು ಮರಣ್ತೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ರೋಗಿಯನ್ನು ನೋಡಿಕೊಳ್ಳತ್ತಿದ್ದ ಸ್ಟಾಪ್ ನರ್ಸ್‌ ಅಮಾನತಿಗೆ ಆದೇಶ ಮಾಡಲಾಗಿದೆ ಎಂದು ಈ ಟಿವಿ ಭಾರತಕ್ಕೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ಶರಣಪ್ಪ ಕಟ್ಟಿ ಮಾಹಿತಿ ನೀಡಿದ್ದಾರೆ.

Intro:ವಿಜಯಪುರ: ಜಿಲ್ಲಾಸ್ಪತ್ರೆಯ ಅತಿಸಾರ ಬೇದಿಯಿಂದ ಬಳಲುತ್ತಿದ್ದ ರೋಗಿಯನ್ನು 108 ಸಿಬ್ಬಂದಿ ಜಿಲ್ಲಾಸ್ಪತ್ರೆ ದಾಖಲಿಸಿದರು ಇಂದು ಬೆಳಿಗ್ಗೆ ರೋಗಿ ರವಿ ಪಾಟೀಲ ಸಾವನ್ನಪ್ಪಿದ್ದಾನೆ ಈ ಘಟನೆಗೆ ಸಂಭಂಧಿಸಿದಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ಶರಣಪ್ಪ ಕಟ್ಟಿ 7 ಜನ ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಾರ್ಡ್ ನಂ 230 ರ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಡಾ.ಶರಣ ಕಟ್ಟಿ ಮಾಹಿತಿ ನೀಡಿದ್ದಾರೆ.Body:ರೋಗಿ ರವಿ ಪಾಟೀಲ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣದಿಂದ ಸಾವನ್ನಪ್ಪಿದ್ದಾನೆ‌ ಎಂದು ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡಿಸಿ ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದರು.Conclusion:ರೋಗಿ ರವಿ ಪಾಟೀಲ ಸಾವಿನ‌ ವಿಚಾರವಾಗಿ ಮಾತನಾಡಿದ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ರೋಗಿ ಮಾನಸಿಕ ಅಸ್ತಿತ್ವಕ್ಕೆ ಒಳಗಾಗಿದ್ದ ನಾವು ವಾರ್ಡ್ ಗೆ ಹೋಗಿ ನೋಡಿದ್ದಾಗ ಪ್ರತಿ ಐದು ನಿಮಿಷಕ್ಕೆ ತನ್ನ ಮೈ ಮೇಲೆ ಇದ್ದ ಬಟ್ಟೆಯನ್ನು ತೆಗೆದುಕೊಳ್ಳುತ್ತಿದ್ದ, ರೋಗಿ ಮೃತ ದೇಹವನ್ನು ಮರಣ್ತೋರ ಪರೀಕ್ಷಗೆ ಕಳಿಸಲಾಗಿದೆ. ಮರಣೋತ್ತರ ವರದಿ ಬಂದ. ಮೇಲೆ ಸಾವಿಗೆ ಕಾರಣ ತಿಳಿದು ಬರಲಿದೆ. ರೋಗಿಯನ್ನು ನೋಡಿಕೊಳ್ಳತ್ತಿದ್ದ ಸ್ಟಾಪ್ ನರ್ಸ್‌ಗೂ ಅಮಾನತಿಗೆ ಆದೇಶ ಮಾಡಲಾಗುತ್ತದೆ ಎಂದು ಈ ಟಿವಿ ಭಾರತಕ್ಕೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ಶರಣಪ್ಪ ಕಟ್ಟಿ ಮಾಹಿತಿ ನೀಡಿದ್ದಾರೆ..

ಶಿವಾನಂದ ಮದಿಹಳ್ಳಿ
ವಿಜಯಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.