ETV Bharat / state

ರಾಮಮಂದಿರ ನಿರ್ಮಾಣ ವಿರೋಧಿಸುವವರನ್ನು ಪಾಕ್‌ಗೆ ಕಳುಹಿಸಿ: ಮುತಾಲಿಕ್ - Pramod Muthalik Reaction

ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಇಂಥ ಹೇಳಿಕೆ ನೀಡುತ್ತಿದ್ದರೂ ಕೇಂದ್ರ ಸರ್ಕಾರ ಯಾಕೆ ಮೌನ ವಹಿಸಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಚ್ಚರಿ ವ್ಯಕ್ತಪಡಿಸಿದರು.

Pramod Muthalik Reaction About Muslim Personal Law Board Statement
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ
author img

By

Published : Aug 8, 2020, 5:29 PM IST

Updated : Aug 8, 2020, 11:17 PM IST

ವಿಜಯಪುರ: ಅಯೋಧ್ಯೆಯಲ್ಲಿ ಮತ್ತೆ ಬಾಬರಿ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿಕೆ ನೀಡುತ್ತಿದ್ದು, ತಕ್ಷಣ ಆ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ರಾಮ ಮಂದಿರ ನಿರ್ಮಾಣ ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದರು. ಮಂದಿರದ ನಿರ್ಮಾಣಕ್ಕೆ ಶಂಕುಸ್ಥಾಪನೆ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಆದರೆ, ರಾಮ ಮಂದಿರ ನಿರ್ಮಾಣವನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಿರೋಧಿಸುವುದು ಸರಿಯಲ್ಲ. ಬಾಬರ್​ ಮಸೀದಿ ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಹಾಜಿ ಸೋಫಿಯಾ ಟರ್ಕಿ ಉದಾಹರಣೆ ನೀಡಿದ್ದಾರೆ ಎಂದರು.

ಇದು ನ್ಯಾಯಾಂಗ ನಿಂದನೆಯಾಗುತ್ತೆ. ಸುಪ್ರೀಂಕೋರ್ಟ್ ಒಮ್ಮತದಿಂದ ತೀರ್ಪು ನೀಡಿದೆ. ತೀರ್ಪಿಗೆ ಮುಂಚೆ ಒಪ್ಪಿಗೆ ಇದೆ ಎಂದು ಹಿಂದೂ-ಮುಸ್ಲಿಂ ಮುಖಂಡರು‌ ಒಪ್ಪಿದ್ದರು. ಈಗ ಈ ರೀತಿ ಹೇಳಿಕೆ ನೀಡಿರುವುದು ಹಿಂದೂಗಳನ್ನು ಕೆರಳಿಸುತ್ತಿದೆ. ಈವರೆಗೆ ಈ ಬೋರ್ಡ್, ಎಸ್​ಡಿಪಿಐ ವಿರುದ್ಧ ಯಾಕೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಇಂಥ ಹೇಳಿಕೆ ನೀಡುತ್ತಿದ್ದರೂ ಕೇಂದ್ರ ಸರ್ಕಾರ ಯಾಕೆ ಮೌನ ವಹಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಸುಪ್ರೀ ಕೋರ್ಟ್ ತೀರ್ಪು ನೀಡಿ 10 ತಿಂಗಳ ನಂತರ ಇವರು ಯಾಕೆ ಅಪಸ್ವರ ಎತ್ತುತ್ತಿದ್ದಾರೆ? ಇದು ಸಮಾಜದ್ರೋಹಿ, ದೇಶದ್ರೋಹಿ ಕೆಲಸವಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆ ಜತೆ ಶಾಮೀಲು:

ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸುಲಿಗೆ ಮಾಡುತ್ತಿವೆ. ಕೆಲವರು ಎಡ್ಮಿಶನ್ ತೆಗೆದುಕೊಳ್ಳುತ್ತಿಲ್ಲ. ದುಬಾರಿ ಬಿಲ್ ಮಾಡಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದೆ. ಇದಕ್ಕೆ ನಿಯಂತ್ರಣ ಹೇರಬೇಕಾದ ರಾಜ್ಯ ಸರ್ಕಾರ ಮೌನ ವಹಿಸಿರುವುದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಸತ್ಯ ಕಾಣುತ್ತಿದೆ. ಸರ್ಕಾರ ಸಹ ಶಾಮೀಲಾಗಿದೆ ಎಂದು ಮುತಾಲಿಕ್​ ಆರೋಪಿಸಿದರು.

ಡಾ. ಗಿರಿಧರ ಕಜೆ 9 ದಿನಗಳಲ್ಲಿ ಕೊರೊನಾ ರೋಗಿಗಗಳನ್ನು ಗುಣಪಡಿಸಿದ್ದಾರೆ. ಕೇವಲ 300 ರೂ.ಯನ್ನು ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಈಗಾಗಲೇ 70 ಲಕ್ಷ ಮಾತ್ರೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಆದರೆ, ಅವರಿಗೆ ಹಣ ನೀಡಿಲ್ಲ ಎಂದು ದೂರಿದರು. ಡಾ. ಗಿರಿಧರ ಕಜೆ ಹೊಸ ಔಷಧಿಯನ್ನು ಕಂಡು ಹಿಡಿದಿಲ್ಲ, 20 ವರ್ಷಗಳಿಂದ ನೀಡುತ್ತಿರುವ ಔಷಧಿಗಳನ್ನು ನೀಡುತ್ತಿದ್ದಾರೆ. ಫ್ರೀ ಫಾರ್ಮುಲಾ ನೀಡುವುದಾಗಿ ಹೇಳಿದರೂ ಸರ್ಕಾರ ಬಿಡುಗಡೆ ಮಾಡಿಲ್ಲ. ಸರ್ಕಾರ ಅಲೋಪಥಿಕ್ ಮಾಫಿಯಾ, ಲಾಬಿಗೆ ಮಣಿದಿದೆ ಎಂದು ಆರೋಪಿಸಿದರು.

ಗಣೇಶೋತ್ಸವಕ್ಕೆ ಅನುಮತಿ ನೀಡಿ:

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಸರ್ಕಾರ ಈವರೆಗೆ ಅವಕಾಶ‌ ನೀಡಿಲ್ಲ. ಕೋವಿಡ್​ ನಿಯಮಗಳ ಪ್ರಕಾರವೇ ಆಚರಣೆಗೆ ಅವಕಾಶ ನೀಡಿ ಎಂದು ಮುತಾಲಿಕ್​​ ಒತ್ತಾಯಿಸಿದರು. ಮಾಲ್, ಬಾರ್, ಹೋಟೇಲ್​​ಗಳನ್ನು ತೆರೆಯಲು ಸರ್ಕಾರ ಈಗಾಗಲೇ ಅವಕಾಶ ನೀಡಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದರೆ ತೀರ್ಥ ಕೊಡಲ್ಲ, ಪ್ರಸಾದ ಕೊಡಲ್ಲ, ಭಜನೆ ಮಾಡಲ್ಲ. ನಿಯಮದ ಪ್ರಕಾರವೇ ಆಚರಣೆ ಮಾಡುತ್ತೇವೆ. ಮಹಾರಾಷ್ಟ್ರದ ಮಾದರಿಯಲ್ಲಿಯೇ ಉತ್ಸವಕ್ಕೆ ಅವಕಾಶ ನೀಡಬೇಕು. ಅವಕಾಶ ನೀಡದಿದ್ದರೆ ಆಚರಣೆ ನಿಲ್ಲಿಸುವುದಿಲ್ಲ, ಬೇಕಿದ್ದರೆ ಬಂಧಿಸಿ ಎಂದು ಸವಾಲು ಹಾಕಿದರು.

Last Updated : Aug 8, 2020, 11:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.