ವಿಜಯಪುರ: ಕೆಪಿಎಸ್ಸಿ, ಕೆಇಎ ವಿವಿಧ ಇಲಾಖೆಗಳಿಗೆ ನಡೆಸುವ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳನ್ನ ಗುಮ್ಮಟನಗರಿಯಲ್ಲಿ ಸ್ಥಾಪಿಸುವಂತೆ ರಾಜ್ಯ ಪದವೀಧರ ಒಕ್ಕೂಟದ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವಂತೆ ಒತ್ತಾಯ ಐತಿಹಾಸಿಕವಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನಕ್ಷೆಯಲ್ಲಿ ಗುರುತಿಸಿಕೊಂಡ ವಿಜಯಪುರದಲ್ಲಿ ವಿವಿಧ ಇಲಾಖೆಗಳ ಹುದ್ದೆ ಭರ್ತಿಗೆ ನಡೆಸುವ ಪರೀಕ್ಷಾ ಕೇಂದ್ರಗಳು ಇಲ್ಲದ ಕಾರಣ ರಾಜಧಾನಿ ಸೇರಿದಂತೆ ದೂರದ ಊರುಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೋಗುವ ಅನಿರ್ವಾಯತೆ ಇದೆ. ಹೀಗಾಗಿ ಕೆಲವು ಅಭ್ಯರ್ಥಿಗಳಿಗೆ ಆರ್ಥಿಕ ತೊಂದರೆ ಎದುರಿಸುವಂತಾಗಿದೆ. ಕೆಲ ವಿಶೇಷಚೇತನರಿಗೆ ಬೆಂಗಳೂರಿಗೆ ಹೋಗಿ ಪರೀಕ್ಷೆ ಬರೆಯಲು ಹಿಂದು ಮುಂದು ನೋಡುವಂತಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ರು.ವಿವಿಧ ಇಲಾಖೆಗಳ ಪರೀಕ್ಷಾ ಕೇಂದ್ರಗಳನ್ನ ವಿಜಯಪುರ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಮುಂಬರುವ ಅಧಿವೇಶನದಲ್ಲಿ ಒತ್ತಾಯಿಸುವಂತೆ ಪದವೀಧರ ಸಂಘಟನೆ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರಿಗೂ ಮನವಿ ಸಲ್ಲಿಸಿದ್ರು.