ETV Bharat / entertainment

ದೊಡ್ಮನೆ ಶಕ್ತಿ ಪಾರ್ವತಮ್ಮ ಹಾದಿಯಲ್ಲಿ ಸೊಸೆ ಗೀತಾ ಶಿವರಾಜ್​ಕುಮಾರ್: ಸಿನಿಮಾ ಫೈನಲ್ ಮಾಡೋದು ಇವರೇ

ನಟ ಸಾರ್ವಭೌಮ ಡಾ.ರಾಜ್​​ಕುಮಾರ್ ಹಿಂದೆ ಶಕ್ತಿಯಾಗಿ ನಿಂತವರು ಪತ್ನಿ ಪಾರ್ವತಮ್ಮ. ಅದೇ ಹಾದಿಯಲ್ಲಿ ಗೀತಾ ಶಿವರಾಜ್​ಕುಮಾರ್​ ಇದ್ದು, ಸಿನಿಮಾ ಮತ್ತು ಸಾಮಾಜಿಕ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ.

Shivarajkumar, Parvathamma, Geetha
ಪಾರ್ವತಮ್ಮ ಜೊತೆ ಶಿವಣ್ಣ, ಗೀತಾ (Photo Source: ETV Bharat)
author img

By ETV Bharat Entertainment Team

Published : 3 hours ago

ನಟಸಾರ್ವಭೌಮ ಡಾ.ರಾಜ್​​ಕುಮಾರ್ ಕನ್ನಡ ಚಿತ್ರರಂಗದ ಐಕಾನ್. ಅಣ್ಣಾವ್ರ ಯಶಸ್ಸಿನ ಹಾದಿಯಲ್ಲಿ ಪತ್ನಿ ಪಾರ್ವತಮ್ಮ ಅವರ ಕೊಡುಗೆ ಅಪಾರ. 3ನೇ ತರಗತಿವರೆಗೆ ಓದಿದ್ದ ರಾಜ್​ಕುಮಾರ್ ಗಾಯಕರಾಗಿ ಹಾಗೂ ಶ್ರೇಷ್ಠ ನಟನಾಗಿ ಭಾರತೀಯ ಚಿತ್ರರಂಗದಾದ್ಯಂತ ಹೆಸರು ಸಂಪಾದಿಸಿದರು. ಆದರೆ ಸಿನಿಮಾ ಸಾಧಕನ ಹಿಂದೆ ಶಕ್ತಿಯಾಗಿ ನಿಂತವರು ಪಾರ್ವತಮ್ಮ ರಾಜ್‍ಕುಮಾರ್.

ವಜ್ರೇಶ್ವರಿ ಸಂಸ್ಥೆ, ರಾಜ್​ ಸಿನಿಮಾಗಳೆಡೆಗೆ ಪಾರ್ವತಮ್ಮ ಗಮನ: ಹೌದು, ರಾಜ್​​ಕುಮಾರ್ ಅವರ ಸಿನಿಮಾಗಳು ಸರಿಯಾಗಿ ಕಲೆಕ್ಷನ್‌ ಮಾಡುತ್ತಿಲ್ಲ ಎಂಬ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ 'ವಜ್ರೇಶ್ವರಿ ಚಲನಚಿತ್ರ ನಿರ್ಮಾಣ ಸಂಸ್ಥೆ' ಹುಟ್ಟುಹಾಕಿ ನಿರ್ಮಾಪಕಿಯಾದ ಮೊದಲ ಮಹಿಳೆ. ಇದರ ಜೊತೆಗೆ ರಾಜ್​ಕುಮಾರ್ ಸಹೋದರ ವರದಪ್ಪ ಜೊತೆ ಸೇರಿ ರಾಜ್​​ ಸಿನಿಮಾಗಳ ಕಥೆಗಳನ್ನು ಕೇಳುತ್ತಾ, ನಿರ್ಮಾಪಕರು ಯಾರು? ನಿರ್ದೇಶಕರು ಯಾರು? ಸಂಭಾವನೆ ಎಷ್ಟು? ಸೇರಿದಂತೆ ಸಿನಿಮಾಗೆ ಸಂಬಂಧಿಸಿದವುಗಳ‌ ಬಗ್ಗೆ ಮಾತನಾಡುತ್ತಿದ್ದವರು ಪಾರ್ವತಮ್ಮನವರು.

Raj Family
ರಾಜ್​​ ಕುಟುಂಬ (Photo Source: ETV Bharat)

ಸಹಾಯ ಹಸ್ತ ಚಾಚುವ 'ಶಕ್ತಿಧಾಮ': 6ನೇ ಕ್ಲಾಸ್​ವರೆಗೆ ಒದಿದ್ದ ಪಾರ್ವತಮ್ಮ ರಾಜ್‍ಕುಮಾರ್ ಅವರಿಗೆ ವ್ಯವಹಾರಿಕ ಜ್ಞಾನದ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸಿದ್ದ ಕಾರಣ, ಬೀದಿಪಾಲಾದ ಮಕ್ಕಳು ಹಾಗೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳ ಸುರಕ್ಷೆಯ ಉದ್ದೇಶದೊಂದಿಗೆ ಶುರುವಾದ ಸಂಸ್ಥೆಯೇ ಶಕ್ತಿಧಾಮ.

ಪಾರ್ವತಮ್ಮರ ಹಾದಿಯಲ್ಲಿ ಸೊಸೆ ಗೀತಾ ಶಿವರಾಜ್​ಕುಮಾರ್​​: ದೊಡ್ಮನೆಯ ಶಕ್ತಿಯಾಗಿದ್ದ ಪಾರ್ವತಮ್ಮ ರಾಜ್‍ಕುಮಾರ್ ಹಾದಿಯಲ್ಲಿ ಇದೀಗ ಸೊಸೆ ಗೀತಾ ಶಿವರಾಜ್​ಕುಮಾರ್ ಸಾಗುತ್ತಿದ್ದಾರೆ‌. ಬಹುಕಾಲ ಅತ್ತೆ ಪಾರ್ವತಮ್ಮನವರನ್ನು ಬಹಳ ಹತ್ತಿರದಿಂದ ಕಾಣುತ್ತಾ ಬಂದವರು ಗೀತಾ. ದೂರ ನಿಂತು ನೋಡುವವರಿಗೆ ಸಿನಿಮಾ ನಿರ್ಮಾಣ ಅನ್ನೋದು ಒಂದು ವ್ಯವಹಾರವಾಗಿಯಷ್ಟೇ ಕಾಣಿಸುತ್ತದೆ. ಅದು ಬಹುತೇಕರ ಪಾಲಿಗೆ ಒಂದು ಫ್ಯಾಷನ್. ಜೊತೆಗೆ ಹಣ ಹೂಡಿ ದುಪ್ಪಟ್ಟು ಪಡೆದುಕೊಳ್ಳೋ ಬ್ಯುಸಿನೆಸ್ ಅನ್ನೋ ಪರಿಕಲ್ಪನೆ ಇದೆ. ಆದರೆ ಕೇವಲ ವ್ಯವಹಾರಿಕ ಜಾಣ್ಮೆಯಷ್ಟೇ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಒಳ್ಳೆ ಕಥೆಯೊಂದನ್ನು ಆಯ್ಕೆ ಮಾಡೋ ಜಾಣ್ಮೆ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂಥದ್ದೊಂದು ಶಕ್ತಿ ಪಾರ್ವತಮ್ಮನವರಲ್ಲಿತ್ತು. ಆ ಕಾರಣದಿಂದಲೇ ಕೊನೆಯವರೆಗೂ ರಾಜಣ್ಣನನ್ನು ಗೆಲುವೆಂಬುದು ತಬ್ಬಿಕೊಂಡಿತ್ತು. ಇದೀಗ ಅಂತಹ ಸೂಕ್ಷ್ಮ ವಿಚಾರಗಳನ್ನು ಅರಿತಿರುವ ಗೀತಾ ಅವರು ಶಿವರಾಜ್​​ಕುಮಾರ್ ಸಿನಿಮಾಗಳ ಬಗ್ಗೆ ಗಮನ ಹರಿಸಿದ್ದಾರೆ.

Raj Family
ತಂದೆ ತಾಯಿ - ಮಗ ಸೊಸೆ (Photo Source: ETV Bharat)

ಶಿವಣ್ಣನ ಸಿನಿಮಾಗಳು ಗೀತಾರ ಕೈಯಲ್ಲಿ: ಹಾಗೆ ನೋಡಿದರೆ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದು ತೀರಾ ಇತ್ತೀಚೆಗೆ. ಆದ್ರೆ ಆರಂಭದಿಂದಲೇ ಶಿವಣ್ಣನ ವೃತ್ತಿ ಬದುಕಿನ ಜೊತೆಗೆ ‌ಮನೆಯ ಹೊಣೆ ಹೊತ್ತುಕೊಂಡಿದ್ದರು. ಶಿವರಾಜ್​ಕುಮಾರ್ ಆಪ್ತರೊಬ್ಬರು ಹೇಳುವ ಹಾಗೇ, ಗೀತಕ್ಕ ಕೂಡಾ ಥೇಟ್ ಪಾರ್ವತಮ್ಮನವರಂತೆ. ಶಿವಣ್ಣನ ಬಹುತೇಕ ಸಿನಿಮಾ ಕಥೆಗಳನ್ನು ಅವರೇ ಕೇಳ್ತಾರೆ‌. ಸೆಂಚುರಿ ಸ್ಟಾರ್​​​ ಇಂದಿಗೂ ಯಂಗ್ ಆಗಿ ಕಾಣಲು ಕಾರಣ ಗೀತಾ ಅವರ ಕಾಳಜಿ. ಸಂಭಾವನೆ ವಿಚಾರಕ್ಕೆ ಬಂದರೆ, ಕಷ್ಟದಲ್ಲಿರುವ ನಿರ್ಮಾಪಕರ ಬಳಿ ಗೀತಾ ಅವರು ಶಿವಣ್ಣನ ಸಂಭಾವನೆಯಲ್ಲಿ ಕಡಿಮೆ ಪಡೆದಿರೋ ಅದೆಷ್ಟೋ ಉದಾಹರಣೆಗಳಿವೆ. ಈ ಕಾರಣಕ್ಕೆ ಶಿವಣ್ಣನಿಗೆ ಸಿನಿಮಾ ಮಾಡಬೇಕಂತಾ ನಿರ್ಮಾಪಕರು ಸಾಲು ಸಾಲಾಗಿ ನಿಲ್ಲುತ್ತಾರೆಂದು ತಿಳಿಸಿದರು.

Raj Family
ರಾಜ್​ ಕುಟುಂಬ (Photo Source: ETV Bharat)

ಬಹುನಿರೀಕ್ಷಿತ 'ಭೈರತಿ ರಣಗಲ್'... 'ವೇದ' ಚಿತ್ರದ ಮೂಲಕ ಅಧಿಕೃತವಾಗಿ ನಿರ್ಮಾಪಕಿಯಾಗಿ ಗುರುತಿಸಿಕೊಂಡರು. ತಮ್ಮ ಮೊದಲ ಹೆಜ್ಜೆಯಲ್ಲೇ ದೊಡ್ಡ ಗೆಲುವು ಕಂಡರು. ಅಂಥಾದ್ದೊಂದು ಗೆಲುವಿನ ನಂತರ ಮನಸ್ಸು ಮಾಡಿದ್ದರೆ ತಕ್ಷಣವೇ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡುವ ಅವಕಾಶಗಳಿದ್ದವು. ಆದರೆ ಗೀತಾ ಕೂಡಾ ಅತ್ತೆ ಪಾರ್ವತಮ್ಮನವರಂತೆ ಕಥೆ ಹಾಗೂ ಸಮಾಜಕ್ಕೆ ಏನು ಸಂದೇಶ ಇದೆ ಎಂಬುದರೆಡೆಗೆ ಸಾಕಷ್ಟು ಗಮನ ಹರಿಸಿ, ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರೆ‌. ಕಾಲಾವಕಾಶ ತೆಗೆದುಕೊಂಡು ಅವರು ಶಿವಣ್ಣನಿಗಾಗಿ ನಿರ್ಮಾಣ ಮಾಡಿರುವ ಎರಡನೇ ಚಿತ್ರ 'ಭೈರತಿ ರಣಗಲ್'. ನರ್ತನ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಭೈರತಿ ರಣಗಲ್' ಕರುನಾಡ ಚಕ್ರವರ್ತಿಯ ಮುಂದಿನ ಬಹುನಿರೀಕ್ಷಿತ ಸಿನಿಮಾ.

Shivarajkumar and Geetha
ಶಿವರಾಜ್​ಕುಮಾರ್ ದಂಪತಿ (Photo Source: ETV Bharat)

ಮೇಕಿಂಗ್ ಜೊತೆಗೆ ಕಥೆಗೆ ಒತ್ತು... ಸದ್ಯ ಬಿಡುಗಡೆಗೆ ರೆಡಿಯಾಗಿರುವ ಭೈರತಿ ರಣಗಲ್ ಸುತ್ತ ದೊಡ್ಡ ಮಟ್ಟದ ನಿರೀಕ್ಷೆಗಳಿವೆ. ಅದ್ದೂರಿ ಮೇಕಿಂಗ್ ಜೊತೆಗೆ ಕಥೆಗೆ ಹೆಚ್ಚು ಒತ್ತು ಕೊಟ್ಟಿರುವಲ್ಲಿ ಗೀತಕ್ಕನ ಪಾತ್ರ ದೊಡ್ಡದು‌. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಈ ಚಿತ್ರವನ್ನು ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡಿದ್ದು ಇದೇ ನವೆಂಬರ್​​ 15ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

'Bhairati Ranagal' Muhurta
'ಭೈರತಿ ರಣಗಲ್​' ಮುಹೂರ್ತದ ಕ್ಷಣ (Photo Source: ETV Bharat)

ಕಾಸಿದ್ದವರೆಲ್ಲ ಸಿನಿಮಾ ನಿರ್ಮಾಣ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಈ ಮಾತಿಗೆ ಗಾಂಧಿನಗರದ ಗಲ್ಲಿಗಳಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಯಶಸ್ವಿ ಸಿನಿಮಾ ನಿರ್ಮಾಣಕ್ಕೆ ತನ್ನದೇ ಆದ ರೂಪುರೇಷೆಗಳಿವೆ. ಅಂಥ ಗುಣಗಳ ಸ್ವರೂಪದಂತಿದ್ದವರು ಪಾರ್ವತಮ್ಮ ರಾಜ್​ಕುಮಾರ್. ಓರ್ವ ನಿರ್ಮಾಪಕಿಯಾಗಿ, ರಾಜ್ ಅವರಂಥ ಮೇರು ನಟರ ಸಿನಿವೃತ್ತಿಜೀವನವನ್ನು ಸರಿದಿಕ್ಕಿನಲ್ಲಿ ಮುನ್ನಡೆಸಿದ ಪಾರ್ವತಮ್ಮನವರ ಬಗ್ಗೆ ಆಪಾರ ಗೌರವ ಇದೆ. ಬಹುಶಃ ಅದು ಚಿತ್ರರಂಗದ ಉಸಿರಿರುವವರೆಗೂ ಮುಗಿಯದ ಬೆರಗು. ಅಂತಹ ವಾತಾವರಣದೊಳಗೇ ಇದ್ದ ಗೀತಕ್ಕ ಇದೀಗ ಪಾರ್ವತಮ್ಮನವರ ಪಡಿಯಚ್ಚಿನಂತೆ ನಿರ್ಮಾಪಕಿಯಾಗಿದ್ದಾರೆ.

ಇದನ್ನೂ ಓದಿ: ಕಾಂತಾರ ಸೆಟ್​ನಲ್ಲಿ ರಿಷಬ್​ ಶೆಟ್ಟಿ: 60 ದಿನಗಳ ನಿರಂತರ ಶೂಟಿಂಗ್​; 2 ಶೆಡ್ಯೂಲ್​ ಕಂಪ್ಲೀಟ್, ಬಜೆಟ್​ ಮಾಹಿತಿ ಇಲ್ಲಿದೆ​​

ಇನ್ನೂ, ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದ ಬಳಿಕ ಮೈಸೂರಿನಲ್ಲಿರುವ ಶಕ್ತಿಧಾಮವನ್ನು ಸ್ವತಃ ಗೀತಾ ಶಿವರಾಜ್​ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ, ಶಕ್ತಿಧಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಶಿವಣ್ಣನ ಸ್ವಂತ ದುಡಿಮೆಯಲ್ಲಿ ಮಾಡಿಸುತ್ತಿದ್ದಾರೆ‌. ಎಷ್ಟರ ಮಟ್ಟಿಗಂದ್ರೆ, ಶೂಟಿಂಗ್ ಇಲ್ಲ ಅಂದ್ರೆ ಗೀತಾ ಅವರು ಶಿವಣ್ಣನನ್ನು ಕರೆದುಕೊಂಡು ಶಕ್ತಿಧಾಮಕ್ಕೆ ಹೋಗಿ ಅಲ್ಲಿರುವವರ ಜೊತೆ ಸಮಯ ಕಳೆಯೋದು ಹೆಚ್ಚಾಗಿದೆ.

ಇದನ್ನೂ ಓದಿ: 'ರಾಮಾಯಣ'ದಲ್ಲಿ ಯಶ್​, ಸಾಯಿಪಲ್ಲವಿ, ರಣ್​​​ಬೀರ್​ ನಟನೆ ಖಚಿತ: ಬಿಡುಗಡೆಗೂ ಮುಹೂರ್ತ ಫಿಕ್ಸ್

ಭೈರತಿ ರಣಗಲ್ ಸಿನಿಮಾಗಾಗಿ ಗೀತಾ ಸಾಕಷ್ಟು ಶ್ರಮ ಹಾಕಿದ್ದಾರೆ. ಶೂಟಿಂಗ್ ಲೋಕೇಶನ್​ನಿಂದ ಹಿಡಿದು ಸ್ಟಾರ್ ಕಾಸ್ಟ್ ವರೆಗೂ ಗೀತಾ ಶಿವರಾಜ್​ಕುಮಾರ್ ಎಚ್ಚರಿಕೆ ವಹಿಸಿದ್ದಾರಂತೆ. ಶಿವಣ್ಣನ ಪಾತ್ರವನ್ನು ಚೆಂದಗಾಣಿಸಲು ಗೀತಾರವರ ಶ್ರಮ ಹೆಚ್ಚಿದೆ. ಪಾರ್ವತಮ್ಮನವರು ಹೀಗೆಯೇ ರಾಜ್​ ಸಿನಿಮಾದ ಪ್ರತೀ ಹಂತದಲ್ಲಿ ಜವಾಬ್ದಾರಿ ವಹಿಸುತ್ತಿದ್ದರು. ಅದೇ ರೀತಿ ಗೀತಕ್ಕನೊಳಗೂ ಪಾರ್ವತಮ್ಮನವರ ಗುಣಗಳು ಕಾಣಿಸುತ್ತಿವೆ. ಒಟ್ಟಾರೆ ದೊಡ್ಮನೆ ಶಕ್ತಿಯಾಗಿದ್ದ ಪಾರ್ವತಮ್ಮ ರಾಜ್‍ಕುಮಾರ್ ಹಾದಿಯಲ್ಲಿ ಗೀತಾ ಶಿವರಾಜ್​ಮಹತ್ವದ ಮೈಲಿಗಲ್ಲು ಸಾಧಿಸುವ ಲಕ್ಷಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.