ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಸಾರ್ವಜನಿಕರಿಗೆ ಆಗಿದೆ. ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಕೇಳಿ ಬಂದ ಭಾರಿ ಶಬ್ದ ಹಾಗೂ ಭೂಮಿ ಕಂಪನ ಇದಾಗಿದೆ. ಬಾಬಾನಗರ, ಬಿಜ್ಜರಗಿ, ಕಳ್ಳಕವಟಗಿ, ಘೋಣಸಗಿ ಸುತ್ತಮುತ್ತ ಮಧ್ಯಾಹ್ನ 2:04 ನಿಮಿಷಕ್ಕೆ ಭೂಕಂಪನದ ಅನುಭವವಾಗಿದೆ.
ತುಂತುರು ಮಳೆಯ ನಡುವೆ ಭೂಮಿಯಿಂದ ಬಂದ ಜೋರಾದ ಶಬ್ದ ಜನರಲ್ಲಿ ಭೀತಿ ಹುಟ್ಟಿಸಿದೆ. ಘಟನೆಯಿಂದಾಗಿ ಜನ ಗಾಬರಿಗೊಂಡಿದ್ದಾರೆ. ಅಲ್ಲದೇ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಆದರೆ, ಜಿಲ್ಲಾಡಳಿತ ಮಾತ್ರ ಭೂಕಂಪನವಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆಲಮಟ್ಟಿಯಲ್ಲಿ ಇರುವ ಭೂಕಂಪನ ಮಾಪಕ ಕೇಂದ್ರದಲ್ಲಿ ಯಾವುದೇ ಭೂಕಂಪನ ಮಾಹಿತಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಓದಿ: ವಿಜಯಪುರ: ಭೂಮಿ ಕಂಪಿಸಿದ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ