ವಿಜಯಪುರ: ಕೊರೊನಾ ಭೀತಿಯಿಂದಾಗಿ ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಾರದೆ ಬಸ್‌ಗಳು ಖಾಲಿ ಖಾಲಿಯಾಗಿ ನಿಂತಿವೆ.
ಲಾಕ್‌ಡೌನ್ ಅನ್ನು ಸಡಿಲಿಸಿ, ಸಾರ್ವಜನಿಕರಿಗೆ ದೂರದ ಊರುಗಳಿಗೆ ಹೋಗಲು ಸರ್ಕಾರ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಆದರೆ ಗುಮ್ಮಟನಗರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ. ನಿತ್ಯ ನಿಲ್ದಾಣಕ್ಕೆ ಬರುವ ನೂರಾರು ಬಸ್‌ಗಳು ಪ್ರಯಾಣಿಕರಿಲ್ಲದ ನಿಲ್ಲುತ್ತಿವೆ.
ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಕೋವಿಡ್-19 ವೈರಸ್ ಕಂಡುಬರುತ್ತಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್ನಲ್ಲಿ ಪ್ರಯಾಣಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಭಾನುವಾರ ಲಾಕ್‌ಡೌನ್ ಅನ್ನು ಸರ್ಕಾರ ರದ್ದು ಮಾಡಿದರೂ ಕೂಡ ಬೆಳಗಿನಿಂದ ಪ್ರಯಣಿಕರು ಮಾತ್ರ ಬರುತ್ತಿಲ್ಲ. ಇತ್ತ ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರ ಬರುವಿಕೆಗಾಗಿ ನಿರ್ವಾಹಕರು ಬಸ್ ನಿಲ್ದಾಣದ ಆಸನಗಳಲ್ಲಿ ಕುಳಿತು ಕಾಯುತ್ತಿದ್ದಾರೆ. ನಿಲ್ದಾಣದ ಮಳಿಗೆಗಳಲ್ಲೂ ಗ್ರಾಹಕರಿಲ್ಲದೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ.