ETV Bharat / state

ಮನಗೂಳಿಯಲ್ಲಿ ಭೂಕಂಪನವಾಗಿಲ್ಲ: ಜನರಿಗೆ ಅಭಯ ನೀಡಿದ ಜಿಲ್ಲಾಧಿಕಾರಿ - P. Sunil Kumar talks the earthquake

ವಿಜಯಪುರ ಜಿಲ್ಲೆಯ ಮನಗೂಳಿಯಲ್ಲಿ ಭೂಕಂಪನ ಸಂಭವಿಸಿಲ್ಲ. ಹೀಗಾಗಿ ಯಾರೊಬ್ಬರು ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​ ತಿಳಿಸಿದ್ದಾರೆ.

p-sunil-kumar
ಡಿಸಿ ಪಿ.ಸುನೀಲ್​ ಕುಮಾರ್
author img

By

Published : Sep 17, 2020, 1:11 PM IST

ವಿಜಯಪುರ: ಜಿಲ್ಲೆಯ ಮನಗೂಳಿಯಲ್ಲಿ ಭೂಕಂಪನವಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಜಿಲ್ಲೆಯ ಆಲಮಟ್ಟಿಯಲ್ಲಿ ಸಿಸ್ಮಿಕ್ ಸೆಂಟರ್ ನಲ್ಲಿ ಭೂಮಿ ಕಂಪಿಸಿದ ಬಗ್ಗೆ ಯಾವುದೇ ಅಂಶಗಳು ದಾಖಲಾಗಿಲ್ಲ. ಆಲಮಟ್ಟಿಯ ಭೂಕಂಪ ಮಾಹಿತಿ ಕೇಂದ್ರದಲ್ಲಿ ಯಾವುದೇ ಸಂಕೇತಗಳು ಇಲ್ಲವೆಂದು ತಿಳಿಸಿದ್ದಾರೆ.

ರಾತ್ರಿ ಭೂಮಿ ಕಂಪಿಸಿದ ಅನುಭವದ ಹಿನ್ನೆಲೆ ಮನಗೂಳಿ ನಿವಾಸಿಗಳು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟನೆ ನೀಡಿದ್ದು, ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.