ETV Bharat / state

ಜ.12ರಿಂದ ಸಿದ್ಧೇಶ್ವರ ಸಂಕ್ರಮಣ ಜಾತ್ರೆ: 9 ದಿನಗಳ ಮಹೋತ್ಸವಕ್ಕೆ ಭರ್ಜರಿ ತಯಾರಿ

ಜನವರಿ 12ರಿಂದ‌ 18ರವರೆಗೆ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಸಿದ್ಧೇಶ್ವರ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸಯ್ಯ ಹಿರೇಮಠ ತಿಳಿಸಿದರು.

Vijayapura
ಜ.12ರಿಂದ ಸಿದ್ಧೇಶ್ವರ ಸಂಕ್ರಮಣ ಜಾತ್ರೆ
author img

By

Published : Jan 9, 2020, 8:00 PM IST

ವಿಜಯಪುರ: ಜನವರಿ 12ರಿಂದ‌ 18ರವರೆಗೆ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸಯ್ಯ ಹಿರೇಮಠ ತಿಳಿಸಿದರು.

ಜ.12ರಿಂದ ಸಿದ್ಧೇಶ್ವರ ಸಂಕ್ರಮಣ ಜಾತ್ರೆ

ನಗರದ ಸಿದ್ಧೇಶ್ವರ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 9 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳ‌ ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ಜ.12ರಂದು ನಂದಿ ಧ್ವಜ, ಗೋಮಾತಾ ಮೆರವಣಿಗೆ ನಡೆಲಿದೆ. ಜ.13ರಂದು ನಂದಿ ಧ್ವಜ ಉತ್ಸವ ನಡೆಯಲಿದ್ದು, ರಾತ್ರಿ 8 ಗಂಟೆಗೆ ಭಜನಾ‌ ಕಾರ್ಯಕ್ರಮ ನಡೆಸಲಾಗುತ್ತದೆ. ಜ.14ರಂದು ಅಕ್ಷತಾ ಭೋಗಿ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ಮನರಂಜನಾ ಕಾರ್ಯಕ್ರಮವನ್ನು ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜ.15ರಂದು ಹೋಮ‌ ಹವನ‌ ಪಲ್ಲಕಿ ಉತ್ಸವವನ್ನು ನಡೆಸಲಾಗುತ್ತದೆ. ಜ.16ರಂದು ಸಿಡಿಮದ್ದು ಪ್ರದರ್ಶನ ನಡೆಸಲಾಗುವುದು. ಜ.17 ರಂದು ಯುವಕರಿಗಾಗಿ ಭಾರ ಎತ್ತು ಸ್ಪರ್ಧೆ, ಜ. 18ರಂದು ಜಂಗೀ ಕುಸ್ತಿ ನಗರದ ಎಸ್ಎಸ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಷ್ಟ್ರೀಯ ಕುಸ್ತಿಪಟುಗಳು ಪಾಲ್ಗೊಳ್ಳುತ್ತಾರೆ ಎಂದರು.

ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ಜಾತ್ರಾ ಮಹೋತ್ಸವಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ 7 ದಿನಗಳ‌ ಕಾಲ‌ ಜಾನುವಾರು ಜಾತ್ರೆ ನಡೆಯುತ್ತವೆ.‌ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಜಾನುವಾರುಗಳು ಬರುತ್ತವೆ.‌ ಪ್ರದರ್ಶನದಲ್ಲಿ ವಿಜೇತ ಜಾನುವಾರುಗಳಿಗೆ ಬಹುಮಾನ ನೀಡಲಾಗುತ್ತದೆ. ಜಾನುವಾರ ಜಾತ್ರೆಯನ್ನು ನಗರದ ಹೊರವಲಯದಲ್ಲಿರುವ ತೋರವಿ ಗ್ರಾಮದಲ್ಲಿ ನಡೆಸಲಾಗುತ್ತದೆ ಎಂದು ಹೇಳಿದರು.

Intro:ವಿಜಯಪುರ: ಜನವರಿ 12 ರಿಂದ‌ 18 ತಾರೀಖಿನ ವರಿಗೆ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮಾಡಲಾಗುವುದು ಎಂದು ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯಾ ಹೊರೇಮಠ ತಿಳಿಸಿದರು.

Body:ನಗರದ ಸಿದ್ದೇಶ್ವರ ಸಭಾ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮಾತನಾಡಿದ ಅವರು, ಸಿದ್ದೇಶ್ವರ ಜಾತ್ರಾ ಮಹೋತ್ಸವ 9 ದಿನಗಳ ಕಾಲ ನಡೆಯಲಿದ್ದು, ಜಾತ್ರೆಯಲ್ಲಿ ಕರ್ನಾಟಕದ ಮಹಾರಾಷ್ಟ್ರ ಸೇರಿ್ಮದಂತೆ ಅನೇಕ ರಾಜ್ಯಗಳ‌ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಜ 12 ರಂದು ನಂದಿ ಧ್ವಜ, ಗೋ ಮಾತಾ ಮೇರೆವಣಿಗೆ ನಡೆಲಿದ್ದು, 13ರಂದು ನಂದಿ ಧ್ವಜ ಉತ್ಸವ ನಡೆಯುತ್ತದೆ‌ ರಾತ್ರಿ 8 ಗಂಟೆಗೆ ಭಜನಾ‌ ಕಾರ್ಯಕ್ರಮ ನಡೆಸಾಗುತ್ತದೆ. ಜ.14 ರಂದು ಅಕ್ಷತಾ ಭೋಗಿ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ಮನರಂಜನಾ ಕಾರ್ಯಕ್ರಮ ಸಿ್ಗದ್ದೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜ.15ಬುಧವಾರ ಹೋಮ‌ ಹವನ‌ ಪಲ್ಲಕಿ ಉತ್ಸವವನ್ನು ನಡೆಸಲಾಗುತ್ತದೆ. ಜ.16 ರಂದು ಆಕರ್ಷಕ ಮದ್ದು ಸುಡುವ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಶುಕ್ರವಾರ 17 ರಂದು ಯುವಕರಿಗಾಗಿ ಭಾರ ಎತ್ತು ಸ್ಪರ್ಧೆ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಾಗೂ 18 ತಾರೀಖಿನಂದು ಜಂಗೀ ಕುಸ್ತಿ ನಗರದ ಎಸ್ ಎಸ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ರಾಷ್ಟ್ರೀಯ ಕುಸ್ತಿಪಟುಗಳು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.

ನಂತರ ಮಾತನಾಡಿದ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಯತ್ನಾಳ ಪ್ರತಿ ವರ್ಷದಂತೆ ಈ ವರ್ಷವೂ 7 ದಿನಗಳ‌ ಕಾಲ‌ ಜಾನುವಾರು ಜಾತ್ರ ನಡೆಯುತ್ತವೆ.‌ ಕರ್ನಾಟಕ ಹಾಗೂ ಮಹಾರಾಷ್ಟ್ರ ಜಾನುವಾರು ಬರುತ್ತವೆ.‌ ಪ್ರದರ್ಶನದಲ್ಲಿ ವಿಜೇತ ಜಾನುವಾರುಗಳಿಗೆ ಬಹುಮಾನ ನೀಡಲಾಗುತ್ತದೆ. ಜಾನುವಾರ ಜಾತ್ರೆಯನ್ನು ನಗರದ ಹೊರವಲಯದಲ್ಲಿರುವ ತೋರವಿ ಗ್ರಾಮದಲ್ಲಿ ನಡೆಸಲಾಗುತ್ತದೆ. ಜಾನುವಾರು ಪ್ರದರ್ಶನಕ್ಕೆ ಸಿದ್ದತೆ ನಡೆದಿದೆ. ಇನ್ನೂ ನಗರದಲ್ಲಿ ಸಿದ್ದೇಶ್ವರ ಸಂಸ್ಥೆಯಿಂದ 1 ಕೋಟಿ ವೆಚ್ಚಯಲ್ಲಿ ಮಧುಮೇಹ ಆಸ್ಪತ್ರೆ ಪ್ರಾರಂಭಿಸಲಾಗುತ್ತದೆ.

Conclusion:ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದು ಹೇಳಿದರು‌. ಪ್ರತಿ ರಾತ್ರಿ ಮನರಂಜನಾ ಕಾರ್ಯಕ್ರಮ ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡುತ್ತಿದೆ ಎಂದು ಶಾಸಕ ಯತ್ನಾಳ ತಿಳಿಸಿದರು..

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.