ವಿಜಯಪುರ: ನಗರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯದ ಬಗ್ಗೆ ಭಕ್ತರು ಮತ್ತು ಸಾರ್ವಜನಿಕರು ಯಾರೂ ಕೂಡ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅವರಿಗೆ ನೆಗಡಿ ಮತ್ತು ಜ್ವರ ಮಾತ್ರ ಇದೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.
ಸ್ವಾಮೀಜಿಯವರ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವದಂತಿಗಳು ಹರಿದಾಡುತ್ತಿವೆ. ಆದರೆ ಇವು ಸತ್ಯಕ್ಕೆ ದೂರವಾಗಿವೆ. ಚಳಿಯ ವಾತಾವರಣದಿಂದ ಶ್ರೀಗಳಿಗೆ ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ. ಅನಾರೋಗ್ಯಕ್ಕೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದ ಶ್ರೀಗಳು ಆಶ್ರಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆಯೂ ಸಹ ಭಕ್ತರಿಗೆ ದರ್ಶನ ನೀಡಿದ್ದಾರೆ.
ಶ್ರೀಗಳಿಗೆ ಯಾವುದೇ ತೀವ್ರತರದ ಅನಾರೋಗ್ಯ ಇಲ್ಲ. ಸ್ವಾಮೀಜಿಗಳ ಆರೋಗ್ಯ ವಿಚಾರದಲ್ಲಿ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಇಂದು ಬೆಳಗ್ಗೆ ಸ್ವಾಮೀಜಿಗಳು ಎಂದಿನಂತೆ ಬೆಳಗಿನಜಾವ ಎದ್ದಿದ್ದಾರೆ. ಭಕ್ತರೊಂದಿಗೆ ಮಾತನಾಡಿ ಹಿತನುಡಿಗಳನ್ನು ಸಹ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ವದಂತಿ ಸುಳ್ಳಾಗಿದೆ. ಈ ನಿಟ್ಟಿನಲ್ಲಿ ಭಕ್ತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಆಶ್ರಮದಲ್ಲಿನ ಇತರ ಸ್ಚಾಮೀಜಿಗಳು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸೀತೆ ಮೇಲಿನ ಕೋಪಕ್ಕೆ ಅನ್ನ ತ್ಯಜಿಸಿದ ರಾಮ.. ಈ ಗಂಡ ಹಂಡತಿ ಜಗಳ ಉಂಡು ಮಲಗೋ ತನಕ ಅಲ್ಲ, 42 ವರ್ಷಗಳಿಂದ!