ಮುದ್ದೇಬಿಹಾಳ: 2020-21ನೇ ಸಾಲಿನ 15ನೇ ಹಣಕಾಸು ಹಾಗೂ ಇತರ ತಾ.ಪಂ ಅನುದಾನ 2.03 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಗೆ ತಾ.ಪಂಚಾಯತ್ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ.
ಪಟ್ಟಣದ ತಾ.ಪಂ ಸಭಾಭವನದಲ್ಲಿ ಬುಧವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ನಿರ್ಣಯ ಕೈಗೊಂಡಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎರಡು ತಾಲೂಕು ಪಂಚಾಯಿತಿಗಳು ರಚನೆಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕಿಗೆ 1.15 ಕೋಟಿ ರೂ. ಹಾಗೂ ತಾಳಿಕೋಟೆ ತಾಲೂಕಿಗೆ 88 ಲಕ್ಷ ರೂ.ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಕ್ರಿಯಾಯೋಜನೆಗೆ ತಾ.ಪಂ ಸದಸ್ಯರು ಒಕ್ಕೂರಲಿನಿಂದ ಸಮ್ಮತಿ ನೀಡಿದ್ದಾರೆ ಎಂದು ಸಭೆಯ ಬಳಿಕ ತಾ.ಪಂ ಇಒ ಶಶಿಕಾಂತ ಶಿವಪೂರೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
![ಸಭೆಯ ತಿಳುವಳಿಕೆ ಪತ್ರ](https://etvbharatimages.akamaized.net/etvbharat/prod-images/kn-mbl-tpmeeting-27-01-kac10030_27052020152949_2705f_1590573589_103.jpg)
ಕೋವಿಡ್-19 ಕುರಿತಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ತಾಪಂ ಸದಸ್ಯರ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಸಿ ನೀಡಬಹುದಾಗಿದೆ. ಈ ಬಗ್ಗೆ ಆಯಾ ತಾಪಂ ಸದಸ್ಯರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
![ಸದಸ್ಯರ ವಿಶೇಷ ಸಾಮಾನ್ಯ ಸಭೆ](https://etvbharatimages.akamaized.net/etvbharat/prod-images/kn-mbl-tpmeeting-27-01-kac10030_27052020152949_2705f_1590573589_515.jpg)