ETV Bharat / state

ರಾಜ್ಯ ಸಂಪುಟ ವಿಸ್ತರಣೆ ಕುರಿತು ಹಾದಿಬೀದಿ ಹೇಳಿಕೆ ಬೇಡ: ಸಂಸದ ರಮೇಶ ಜಿಗಜಿಣಗಿ

author img

By

Published : Feb 12, 2022, 2:31 PM IST

ಸಿಎಂ ಬದಲಾವಣೆ ಬಗ್ಗೆ ಈ ಹಿಂದೆ ಕೂಗು ಕೇಳಿ ಬಂದಾಗ ನಾನು ವಿರೋಧಿಸಿದ್ದೆ. ಈಗ ಸಂಪುಟ ರಚನೆ, ಇಲ್ಲವೇ ಪುನರ್​​ ರಚನೆ ಬಗ್ಗೆ ನಮ್ಮವರು ಹಾದಿ-ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಇದಕ್ಕೆ ನನ್ನ ವಿರೋಧವಿದೆ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.

vijayapur mp ramesh jigajinagi
ವಿಜಯಪುರ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ನಮ್ಮ ಪಕ್ಷದ ಸಚಿವರು, ಶಾಸಕರು ಹಾದಿ - ಬೀದಿಯಲ್ಲಿ ಪಕ್ಷದ ವಿರುದ್ಧ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಈ ಬಗ್ಗೆ ಹೈಕಮಾಂಡ್​ಗೆ ಪತ್ರ ಬರೆದು ತಿಳಿಸಿದ್ದೇನೆ ಎನ್ನುವ ಮೂಲಕ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಹಾಗೂ ಕೆಲ ಸಚಿವರಿಗೆ ಟಾಂಗ್ ನೀಡಿದರು.

ರಾಜ್ಯ ಸಂಪುಟ ವಿಸ್ತರಣೆ ಕುರಿತು ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಈ ಹಿಂದೆ ಕೂಗು ಕೇಳಿ ಬಂದಾಗ ನಾನು ವಿರೋಧಿಸಿದ್ದೆ. ಈಗ ಸಂಪುಟ ರಚನೆ, ಇಲ್ಲವೇ ಪುನರ್​​ ರಚನೆ ಬಗ್ಗೆ ನಮ್ಮವರು ಹಾದಿ - ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಇದಕ್ಕೆ ನನ್ನ ವಿರೋಧವಿದೆ. ಈಗಾಗಲೇ ಹೈಕಮಾಂಡ್​​ ಜತೆ ಮಾತನಾಡಿದ್ದೇನೆ. ಆದರೂ ಪಕ್ಷದ ಕೆಲವರು ನಿತ್ಯ ನೀಡುತ್ತಿರುವ ಹೇಳಿಕೆ ಬಗ್ಗೆ ಬೇಸರವಾಗುತ್ತದೆ ಎಂದರು.

ಸಂಪುಟ ರಚನೆಯಾದರೆ ವಿಜಯಪುರಕ್ಕೂ ಸಚಿವ ಸ್ಥಾನ ದೊರೆಯಬೇಕು ಎಂಬ ಮಾತಿಗೆ ನನ್ನ ಬೆಂಬಲ ಇದೆ. ಆದರೆ, ಯಾರೇ ಆದರೂ ಸಂತೋಷ. ಇವರೇ ಆಗಬೇಕು, ಅವರೇ ಆಗಬೇಕು ಎನ್ನುವುದು ಸರಿಯಲ್ಲ ಎಂದು ಸಂಸದ ಜಿಗಜಿಣಗಿ ಹೇಳಿದರು.

ಇದನ್ನೂ ಓದಿ: ಸೋಮವಾರದ ಪರಿಸ್ಥಿತಿ ಪರಿಶೀಲಿಸಿ ಪಿಯು ಕಾಲೇಜು ಆರಂಭಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.