ETV Bharat / state

ಸದಾನಂದಗೌಡರಿಗೆ ನಮ್ಮ ಮೇಲೆ ಮೊದಲಿನಿಂದಲೂ ಪ್ರೀತಿ ಜಾಸ್ತಿ: ಶಾಸಕ ಯತ್ನಾಳ್ - ಸದಾನಂದಗೌಡರಿಗೆ ನಮ್ಮ ಮೇಲೆ ಮೊದಲಿನಿಂದಲೂ ಪ್ರೀತಿ

ನಾನು ಸ್ವಯಂ ಘೋಷಿತ ರಾಷ್ಟ್ರೀಯ ನಾಯಕನೂ ಅಲ್ಲ, ಸ್ವಯಂ ಘೋಷಿತ ರಾಜ್ಯ ನಾಯಕನೂ ಅಲ್ಲ. ಸ್ವಯಂ ಘೋಷಿತ ಜಿಲ್ಲಾ ನಾಯಕನೂ ಅಲ್ಲ ಎನ್ನುವ ಮೂಲಕ ಸದಾನಂದಗೌಡ ಹೇಳಿಕೆಗೆ ಯತ್ನಾಳ್ ತೀರುಗೇಟು ನೀಡಿದರು.

mla yatnal talk about Statement of Union Minister DV Sadananda Gowda
ಶಾಸಕ ಯತ್ನಾಳ್
author img

By

Published : Dec 25, 2020, 7:38 PM IST

ವಿಜಯಪುರ: ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಶಾಸಕ ಯತ್ನಾಳ್

ವಿಜಯಪುರದಲ್ಲಿ ಮಾತನಾಡಿರುವ ಅವರು, ಸದಾನಂದಗೌಡರು ಬಹಳ ಒಳ್ಳೆಯ ಸಲಹೆ ಕೊಟ್ಟಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನೊಬ್ಬ ಸಾಮಾನ್ಯ ಶಾಸಕ, ಸೇವಕನಾಗಿದ್ದೇನೆ ಅಷ್ಟೇ ಹೊರತು ಬೇರೇನೂ ಅಲ್ಲ. ನಾನು ರಾಷ್ಟ್ರೀಯ ನಾಯಕ ಎಂದು ಎಲ್ಲೂ ಹೇಳಿಕೊಂಡಿಲ್ಲ. ಅವರು ಹೇಳಿದ್ದು 100ಕ್ಕೆ 100ರಷ್ಟು ಸತ್ಯವಿದೆ ಎಂದು ವ್ಯಂಗ್ಯವಾಡಿದರು.

ಓದಿ: ‘ನಾನು ಯಾರಿಗೂ ದೇಶದ್ರೋಹಿ ಎಂದಿಲ್ಲ’.... ಯತ್ನಾಳಗೆ ನೋಟಿಸ್​ ನೀಡಿರೋದು ಪಕ್ಷದ ವಿಚಾರ: ಡಿವಿಎಸ್​ ಸ್ಪಷ್ಟನೆ

ಇಷ್ಟು ದೊಡ್ಡ ಜ್ಞಾನ, ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಾನು ಸ್ವಯಂ ಘೋಷಿತ ರಾಷ್ಟ್ರೀಯ ನಾಯಕನೂ ಅಲ್ಲ, ಸ್ವಯಂ ಘೋಷಿತ ರಾಜ್ಯ ನಾಯಕನೂ ಅಲ್ಲ, ಸ್ವಯಂ ಘೋಷಿತ ಜಿಲ್ಲಾ ನಾಯಕನೂ ಅಲ್ಲ ಎನ್ನುವ ಮೂಲಕ ಸದಾನಂದಗೌಡ ಹೇಳಿಕೆಗೆ ತೀರುಗೇಟು ನೀಡಿದರು.

ಸದಾನಂದಗೌಡರಿಗೆ ನಮ್ಮ ಮೇಲೆ ಮೊದಲಿನಿಂದಲೂ ಪ್ರೀತಿ ಇದೆ. ಅವರು ಈ ಹಿಂದೆ ನನ್ನನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದರು. ಆಗಿನಿಂದ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಇದೆ‌ ಎಂದು ಲೇವಡಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.