ETV Bharat / state

ಹದ್ದು ಮೀರಿ ಮಾತನಾಡಿದರೆ ನಾವು ಮಾತನಾಡಬೇಕಾಗುತ್ತದೆ: ಯತ್ನಾಳ್ ಎಚ್ಚರಿಕೆ - ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಹಿಂದೂಗಳ ನಾಶ ಮಾಡೋ ಹೇಳಿಕೆ ನೀಡಿದ್ದಾರೆ, ಇದು ಅವರಿಗೆ ಕೊನೆಯ ಎಚ್ಚರಿಕೆ, ಬಿಜೆಪಿ ಹಾಗೂ ಹಿಂದೂಗಳ ಬಗ್ಗೆ ಇದೇ ರೀತಿ ಮಾತನಾಡಿದರೆ ಅನಿವಾರ್ಯವಾಗಿ ಉತ್ತರ ನೀಡ ಬೇಕಾಗುತ್ತದೆ ಎಂದು ಯತ್ನಾಳ್ ಎಚ್ಚರಿಸಿದರು.

ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

author img

By

Published : Oct 26, 2021, 6:55 PM IST

ವಿಜಯಪುರ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರುಗಳು ವೈಯುಕ್ತಿಕ ಹೇಳಿಕೆ ನೀಡುತ್ತಿದ್ದಾರೆ, ಅದನ್ನೂ ಬಿಟ್ಟು ರಾಜಕೀಯ, ಅಭಿವೃದ್ಧಿ ಸಮಸ್ಯೆ ಬಗ್ಗೆ ಮಾತನಾಡಲಿ‌ ಎಂದರು.

ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಸಿಂದಗಿಯಲ್ಲಿ ಮಾತನಾಡಿದ ಅವರು, ತೀರಾ ವೈಯಕ್ತಿಕ ಹೇಳಿಕೆಗಳು ಸರಿಯಲ್ಲ. ವಿರೋಧಿಗಳು ಬಿಜೆಪಿ ಸರ್ಕಾರದ ಬಗ್ಗೆ ಹಾಗೂ ಪ್ರಧಾನಿ ಮೋದಿ ಅವರ ವೈಯುಕ್ತಿಕ ಕುರಿತು ಮಾತಾಡಿದಾಗ ಬಿಜೆಪಿ ಮಾತನಾಡಿದೆ. ಆದರೆ, ಯಾವುದನ್ನು ವೈಯಕ್ತಿಕವಾಗಿ ಎಂದೂ ಮಾತನಾಡಿಲ್ಲ. ಮೌತ್‌ಕಾ ಸೌದಾಗರ್​, ಚಹಾ ಮಾರುವವ ಎಂಬ ವೈಯಕ್ತಿಕ ಹೇಳಿಕೆಗಳು ಸೋನಿಯಾ‌ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ ಆರಂಭವಾಯಿತು ಎಂದರು.

ಜಮೀರ್ ಅಹ್ಮದ್ ಖಾನ್, ಓವೈಸಿ ಇವರೆಲ್ಲ ಒಂದು‌ ರೀತಿ ಹದ್ದು‌ ಮೀರಿ ವರ್ತನೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ‌ದೇವೇಗೌಡರ ಬಗ್ಗೆ ಎಲ್ಲ ಇತಿಮಿತಿಗಳನ್ನು ಮೀರಿ ಮಾತನಾಡಿ ಉದ್ದಟತನ ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ ರೀತಿ ಮುಂದುವರಿದರೆ ತಕ್ಕ ಉತ್ತರ ಕೊಡಬೇಕಾಗುತ್ತದೆ

ಹಿಂದೂಗಳ ನಾಶ ಮಾಡೋ ಹೇಳಿಕೆ ನೀಡಿದ್ದಾರೆ, ಇದು ಅವರಿಗೆ ಕೊನೆಯ ಎಚ್ಚರಿಕೆ, ಬಿಜೆಪಿ ಹಾಗೂ ಹಿಂದೂಗಳ ಬಗ್ಗೆ ಇದೇ ರೀತಿ ಮಾತನಾಡಿದರೆ ಅನಿವಾರ್ಯವಾಗಿ ಉತ್ತರ ನೀಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾವು ಭಾರತ ಮಾತೆಗೆ ಜಯಕಾರ‌ ಹಾಕೋರು. ಜಮೀರ್ ಅಂತವರು ಬೇರೆ ಬೇರೆಯವರಿಗೆ ಜಯಕಾರ ಹಾಕುತ್ತಾರೆ. ದೇವೇಗೌಡರು, ಕುಮಾರ ಸ್ವಾಮಿಗೆ ಈ ಹಿಂದೆ ಜಯಕಾರ ಹಾಕಿದ್ದರು, ಈಗ ಸಿದ್ದರಾಮಯ್ಯಗೆ ಜಯಕಾರ ಹಾಕುತ್ತಿದ್ದಾರೆ ಎಂದರು.

ಇದೆಲ್ಲ ರಾಜಕೀಯ ಲಾಭಕ್ಕೆ

ಆರ್​​ಎಸ್ಎಸ್ ಬಗ್ಗೆ ಈಗ ಚುನಾವಣೆ ಲಾಭ ಪಡೆಯಲು ಕುಮಾರಸ್ವಾಮಿ‌ ಹಾಗೂ ಜಮೀರ್ ಅಹ್ಮದ್ ಖಾನ್ ಮಾತನಾಡುತ್ತಿದ್ದಾರೆ. ದೇಶ, ಧರ್ಮ ಸಂಸ್ಕೃತಿ ಬಗ್ಗೆ ಆರ್​​ಎಸ್ಎಸ್ ಕೆಲಸ ಮಾಡುತ್ತದೆ.‌ ರಾಜಕೀಯ ಏನಾದರೂ ಮಾತನಾಡಿ, ಆದರೆ, ಆರ್‌ಎಸ್ಎಸ್ ಬಗ್ಗೆ ಮಾತನಾಡಬೇಡಿ ಎಂದರು.

ಆರ್​​ಎಸ್ಎಸ್ ಚಡ್ಡಿ ಕುರಿತು ಕೀಳು ಮಟ್ಟದಲ್ಲಿ ‌ಮಾತನಾಡುತ್ತಿದ್ದಾರೆ. ಹತಾಸೆಯಿಂದ ಜಮೀರ್‌ ಹೀಗೆ ಮಾತನಾಡುತ್ತಿದ್ದಾರೆ. ಇದೇ ದಾಟಿ ಮುಂದುವರಿದರೆ ಸರಿಯಾದ ಉತ್ತರ ನೀಡಬೇಕಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.