ETV Bharat / state

ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಕೊಲೆ - ಋಷಿಕೇಶ ಸೋನೆವಣೆ

Young man killed in Vijayapura: ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.

miscreants-killed-young-man-in-vijayapura
ಹತ್ಯೆಯಾದ ಸಾಹಿಲ್ ಭಾಂಗಿ
author img

By ETV Bharat Karnataka Team

Published : Dec 10, 2023, 9:38 AM IST

Updated : Dec 10, 2023, 6:19 PM IST

ಪೊಲೀಸ್​ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಪ್ರತಿಕ್ರಿಯೆ

ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಹತ್ಯೆಗೈದ ಘಟನೆ ವಿಜಯಪುರ ನಗರದ ಝಂಡಾ ಕಟ್ಟಿ ಬಳಿ ಕಳೆದ ರಾತ್ರಿ ನಡೆದಿದೆ. ಸಾಹಿಲ್ ಭಾಂಗಿ (21) ಕೊಲೆಯಾದ ವ್ಯಕ್ತಿ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, "ಝಂಡಾ ಕಟ್ಟೆ ಬಳಿ ರಾತ್ರಿ 10 ರಿಂದ ಬೆಳಗ್ಗೆ 7 ಗಂಟೆಯ ನಡುವೆ ಯುವಕನ ಕೊಲೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಕೊಲೆಗೀಡಾದ ಯುವಕ ಸಾಹಿಲ್ ಭಾಂಗಿ(21) ಎಂದು ತಿಳಿದು ಬಂದಿದೆ. ಸದ್ಯ ಯುವಕನನ್ನು ಯಾರು ಕೊಲೆ ಮಾಡಿದ್ದಾರೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಇನ್ನು ಹತ್ಯೆಯಾದ ಯುವಕ ಸಾಹಿಲ್ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಗೊತ್ತಾಗಿದೆ. ಈತನ ಮನೆಯವರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತದೆ. ಪೂರ್ಣ ತನಿಖೆಯ ಬಳಿಕವಷ್ಟೇ ಸಾಹಿಲ್ ಭಾಂಗಿ ಕೊಲೆಗೆ ಕಾರಣ ಹಾಗೂ ಯಾರು ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬರಲಿದೆ" ಎಂದರು.

ಇದನ್ನೂ ಓದಿ:ಕೊಡಗು : ಹೋಂಸ್ಟೇನಲ್ಲಿ ಕೇರಳ ಮೂಲದ ದಂಪತಿ ಮಗು ಸಮೇತ ಆತ್ಮಹತ್ಯೆ

ಪ್ರತ್ಯೇಕ ಪ್ರಕರಣ- ವ್ಯಕ್ತಿಯ ಬರ್ಬರ ಹತ್ಯೆ (ಮಂಡ್ಯ): ಇತ್ತೀಚಿಗೆ, ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿತ್ತು. ಯೋಗೇಶ್ (34) ಮೃತರು. ಪೇಂಟಿಂಗ್​ ಕೆಲಸ ಮಾಡಿಕೊಂಡಿದ್ದ ಯೋಗೇಶ್‌ನನ್ನು ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಯೋಗೇಶ್ ಜತೆ ಹಳೆ ವೈಷಮ್ಯ ಹೊಂದಿದ್ದವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಶ್ರೀರಂಗಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ಪಂಚನಾಮೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾತನಾಡಿ, "ಇಂದು ಮುಂಜಾನೆ ಶ್ರೀರಂಗಪಟ್ಟಣ ಟೌನ್​ ಪೊಲೀಸ್​ ಠಾಣೆ ವ್ಯಾಪ್ತಿಯ ಕಾರೇಕುರ ಗ್ರಾಮದಲ್ಲಿ 30 ವರ್ಷದ ವ್ಯಕ್ತಿಯೊಬ್ಬನ ಕೊಲೆ ನಡೆದಿದೆ" ಎಂದು ತಿಳಿಸಿದ್ದರು.

Last Updated : Dec 10, 2023, 6:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.