ETV Bharat / state

BSY ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸರಿಯಲ್ಲ: ಮನಗೂಳಿಶ್ರೀ - ಸಿಎಂ ಬಿ.ಎಸ್.ಯಡಿಯೂರಪ್ಪ

ಯಡಿಯೂರಪ್ಪ ಅವರು ಬಿಜೆಪಿಯನ್ನು ಬೇರು ಮಟ್ಟದಿಂದ ಬೆಳೆಸಿದ್ದಾರೆ. ಅವರು ನಾಲ್ಕು ಬಾರಿ ಸಿಎಂ ಆದಾಗಲೂ ಸರಿಯಾಗಿ ಅಧಿಕಾರ ನಿರ್ವಹಿಸಲು ಬಿಡಲಿಲ್ಲ. ಈಗ ಅವರನ್ನು ತೆಗೆದರೆ, ಲಿಂಗಾಯತ ಸಮುದಾಯವನ್ನು ಬಿಜೆಪಿ ಹೈಕಮಾಂಡ್​ ಎದುರು ಹಾಕಿಕೊಳ್ಳಲಿದೆ ಎಂದು ಅಭಿನವ ಸಂಗನಬಸವ ಶ್ರೀಗಳು ಹೇಳಿದರು.

cm change issue
ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸರಿಯಲ್ಲ: ಮನಗೂಳಿಶ್ರೀ
author img

By

Published : Jul 21, 2021, 1:43 PM IST

ವಿಜಯಪುರ: ಸಿಎಂ ಬಿ.ಎಸ್.ಯಡಿಯೂರಪ್ಪ ಕೊವಿಡ್ ವೇಳೆ ಮಾಡಿದ ಕಾರ್ಯ ಶ್ಲಾಘನೀಯ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸರಿಯಲ್ಲ ಎಂದು ಮನಗೂಳಿ ಹೀರೆಮಠದ ಅಭಿನವ ಸಂಗನಬಸವ ಶ್ರೀಗಳು ಹೇಳಿದರು.

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸರಿಯಲ್ಲ: ಮನಗೂಳಿಶ್ರೀ

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಿಜೆಪಿಯನ್ನು ಬೇರು ಮಟ್ಟದಿಂದ ಬೆಳೆಸಿದ್ದಾರೆ. ಅವರು ನಾಲ್ಕು ಬಾರಿ ಸಿಎಂ ಆದಾಗಲೂ ಸರಿಯಾಗಿ ಅಧಿಕಾರ ನಿರ್ವಹಿಸಲು ಬಿಡಲಿಲ್ಲ. ಈಗ ಅವರನ್ನು ತೆಗೆದರೆ, ಲಿಂಗಾಯತ ಸಮುದಾಯವನ್ನು ಬಿಜೆಪಿ ಹೈಕಮಾಂಡ್​ ಎದುರು ಹಾಕಿಕೊಳ್ಳಲಿದೆ. ಇದು ಒಳ್ಳೆಯದಲ್ಲ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕುರಿತು ಪ್ರತಿಕ್ರಿಯಿಸಿ, ಯತ್ನಾಳ್​ ಸ್ವಾಮೀಜಿಗಳ ವಿರುದ್ಧ ಮಾತನಾಡಿರುವುದನ್ನು ನಾನು ಖಂಡಿಸುತ್ತೇನೆ. ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ಕೂಡಲಸಂಗಮ ಶ್ರೀಗಳು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಸಚಿವ ಮುರುಗೇಶ ನಿರಾಣಿ ಪರ ಮಾತನಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲ ಸ್ವಾಮೀಜಿಗಳ ನಿಲುವು ಒಂದೇ ಆಗಿರುವುದಿಲ್ಲ. ಅವರ‍್ಯಾಕೆ ಸಿಎಂ ಬಿಎಸ್​ವೈ ಅವರನ್ನು ವಿರೋಧಿಸುತ್ತಿದ್ದಾರೆ ಅನ್ನೋದನ್ನು ಅವರನ್ನೇ ಕೇಳಬೇಕು. ಅದಕ್ಕೆ ನಾನು ಉತ್ತರ ಕೊಡಲು ಹೇಗೆ ಸಾಧ್ಯ ಎಂದು ನುಡಿದರು.

ಇದನ್ನೂ ಓದಿ: ನಿನ್ನೆ ನಿರಾಣಿ, ಇಂದು ಬೆಲ್ಲದ್: ಕಾಶಿ ವಿಶ್ವನಾಥನ ಮೊರೆ ಹೋದ ಸಿಎಂ ಸ್ಥಾನದ ಆಕಾಂಕ್ಷಿಗಳು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.