ETV Bharat / state

ವಿಜಯಪುರ: ಪಾಕಿಸ್ತಾನ ಪರ ಪೋಸ್ಟ್ ಮಾಡಿದ್ದ ವ್ಯಕ್ತಿ ಬಂಧನ - etv baharat kannada

ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

man-arrested-for-pro-pakistan-post-in-vijayapura
ವಿಜಯಪುರ:ಪಾಕಿಸ್ತಾನ ಪರ ಪೋಸ್ಟ್ ಮಾಡಿದ್ದ ವ್ಯಕ್ತಿ ಬಂಧನ
author img

By

Published : May 15, 2023, 9:32 PM IST

ವಿಜಯಪುರ: ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಕಾನಬಾವಿ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನಂತರ ಆತನನ್ನು ವಿಜಯಪುರದ ದರ್ಗಾ ಜೈಲಿಗಟ್ಟಿರುವ ಪ್ರಕರಣ ಸೋಮವಾರ ನಡೆದಿದೆ.

ಆರೋಪಿ ವೀರೇಶನು ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಅಪ್ಪಾಜಿ ನಾಡಗೌಡರ ಹೆಸರಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಬರಹವನ್ನು ಪೋಸ್ಟ್ ಮತ್ತು ಶೇರ್ ಮಾಡಿದ್ದ. ಇದು ಅಲ್ಲಿನ ಅನ್ಯ ಕೋಮಿನವರಿಗೆ ಗೊತ್ತಾಗಿ ಆತನನ್ನು ನಾಲತವಾಡದಲ್ಲಿರುವ ಪೊಲೀಸ್ ಔಟ್‌ಪೋಸ್ಟ್​ಗೆ ಕರೆತಂದು ಪೊಲೀಸರಿಗೆ ಒಪ್ಪಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ವಿಚಾರಣೆ ನಡೆಸಿದ ಮೇಲೆ ವೀರೇಶ ತಪ್ಪು ಮಾಡಿರುವುದು ಗೊತ್ತಾಗಿತ್ತು.

ಅಲ್ಲಿಂದ ಆರೋಪಿಯನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು. ವೀರೇಶನು ಬರಹ ರೂಪದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿರುವುದು ದೃಢಪಟ್ಟಿರುವ ಹಿನ್ನೆಲೆ ನಾಲತವಾಡ ಭಾಗದ ಬೀಟ್ ಪೊಲೀಸ್ ಪಿ.ಎಸ್. ಪಾಟೀಲ ಸರ್ಕಾರದ ಪರವಾಗಿ ಸಲ್ಲಿಸಿದ ದೂರಿನನ್ವಯ ಪೂರ್ವಾಗ್ರಹಪೀಡಿತ ಆರೋಪದಡಿ ಪಿಎಸ್​ಐ ಆರೀಫ್ ಮುಷಾಪುರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ.

ಪ್ರಕರಣದ ರಾಜಿಗೆ ವಿಫಲ ಯತ್ನ: ಘಟನೆಯ ಗಂಭೀರತೆ ಅರಿತಿದ್ದರೂ ಕೂಡ ನಾಲತವಾಡದ ಒಂದಿಬ್ಬರು ಯುವ ಮುಖಂಡರು ಪರಸ್ಪರ ಮಾತುಕತೆ ಮೂಲಕ ರಾಜಿ ಮಾಡಿಸಲು ಯತ್ನಿಸಿದ್ದರು. ಆದರೆ ಘಟನೆಯ ಗಂಭೀರತೆ ಅರಿತಿದ್ದ ಪೊಲೀಸರು ರಾಜಿ ಪ್ರಯತ್ನಗಳಿಗೆ ಸೊಪ್ಪು ಹಾಕದೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಶೆ ವ್ಯಕ್ತವಾಗಿದೆ.

ಈ ಹಿಂದೆ ನಡೆದಿತ್ತು ಇಂಥಹದ್ದೇ ಘಟನೆ: ಇನ್ನು ಇದೇ ನಾಲತವಾಡದಲ್ಲಿ ಇದೆ ರೀತಿಯ ಘಟನೆ ಕೆಲವು ವರ್ಷಗಳ ಹಿಂದೆ ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ನಡೆದಿತ್ತು. ಆಗಲೂ ಆರೋಪಿ ವಿರುದ್ಧ ಅಲ್ಲಿನ ಜನರು ಆಕ್ರೋಶಗೊಂಡು ನಾಲತವಾಡ ಹೊರ ಪೊಲೀಸ್ ಠಾಣೆ ಎದುರು ಗದ್ದಲ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇಂಥದ್ದೇ ಘಟನೆ ಮತ್ತೆ ಮರುಕಳಿಸಿದೆ.

ಇದನ್ನೂ ಓದಿ:ಗದಗ: ಭೀಕರ ರಸ್ತೆ ಅಪಘಾತ.. ಮೂವರು ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.