ಮುದ್ದೇಬಿಹಾಳ(ವಿಜಯಪುರ) : ಎಲ್ಲೆಡೆ ಕೊರೊನಾ ಹಾವಳಿ ಮೀತಿ ಮೀರಿದೆ. ಮಾಸ್ಕ್ ಧರಿಸಿಕೊಳ್ಳದ ನಾಗರಿಕರಿಗೆ ಮಹಿಳಾ ಮುಖ್ಯಾಧಿಕಾರಿಯೊಬ್ಬರು ರಸ್ತೆಗಿಳಿದು ಖಡಕ್ ವಾರ್ನಿಂಗ್ ಮಾಡಿದ ಘಟನೆ ತಾಲೂಕಿನ ನಾಲತವಾಡದಲ್ಲಿ ನಡೆದಿದೆ.
ನಾಲತವಾಡ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಇಂದು ನಾಲತವಾಡ ಪಟ್ಟಣದಲ್ಲಿ ಜನರಿಗೆ ಮಾಸ್ಕ್ ಹಾಕಿಕೊಂಡು ಕೊರೊನಾ ನಿಯಂತ್ರಣ ಮಾಡಲು ಜನರಿಗೆ ಮನವಿ ಮಾಡಿದರು.
ಮಾಸ್ಕ್ ಹಾಕಿಕೊಳ್ಳಲು ತಗಾದೆ ತೆಗೆದವರಿಗೆ ದಂಡವನ್ನೂ ಹಾಕಿದರು. ಸ್ವೀಟ್ ಮಾರ್ಟ್ಗಳ ಭಟ್ಟಿಗಳಿಗೆ ತೆರಳಿ ಅಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಿದರು.