ETV Bharat / state

ಕೆಬಿಜೆಎನ್​ಎಲ್ ಕಚೇರಿ ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರ

author img

By

Published : May 13, 2022, 11:56 AM IST

ಕೃಷ್ಣಾ ಭಾಗ್ಯ ಜಲ‌ ನಿಗಮ ಮಂಡಳಿಯ ಪ್ರಧಾನ ಕಾರ್ಯಾಲಯವನ್ನು ಬೆಂಗಳೂರಿನಿಂದ ಆಲಮಟ್ಟಿ ಜಲಾಶಯದ ಆವರಣಕ್ಕೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಲಾಗಿದೆ..

KBJNL Office shifted to alamatti from Bangalore
ಕೆಬಿಜೆಎನ್​ಎಲ್ ಕಚೇರಿ ಆಲಮಟ್ಟಿಗೆ ಸ್ಥಳಾಂತರ

ವಿಜಯಪುರ : ಕೃಷ್ಣಾ ನದಿ ಪಾತ್ರದ ಜನರ ಬಹು ದಿನದ ಬೇಡಿಕೆ ಕೊನೆಗೂ ಈಡೇರುತ್ತಿದೆ. ಕೃಷ್ಣಾ ಭಾಗ್ಯ ಜಲ‌ ನಿಗಮ ಮಂಡಳಿಯ ಪ್ರಧಾನ ಕಾರ್ಯಾಲಯವನ್ನು ಬೆಂಗಳೂರಿನಿಂದ ಆಲಮಟ್ಟಿ ಜಲಾಶಯದ ಆವರಣಕ್ಕೆ ಸ್ಥಳಾಂತರಿಸಲಾಗ್ತಿದೆ.

ಈ ಬಗ್ಗೆ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ ಹೆಚ್.ಎಂ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಕೆಬಿಜೆಎನ್​ಎಲ್ ಸಂಬಂಧಿತ ಎಲ್ಲ ಕಚೇರಿಗಳು ಆದೇಶ ಹೊರಬಿದ್ದ ಒಂದು ವಾರದೊಳಗೆ ಸ್ಥಳಾಂತರ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ಹಾಗೂ ಆ ಭಾಗದ ಜನರಿಗೆ ರಾಜ್ಯದ ಆಡಳಿತ ಹತ್ತಿರವಾಗಲು ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ 2021 ಅಕ್ಟೋಬರ್ 30ರಂದು ಆದೇಶ ಹೊರಡಿಸಿತ್ತು.

ಈ ಕುರಿತು 2021ರ ನವೆಂಬರ್ 24ರಂದು ವರದಿ ಪರಿಶೀಲನೆ ನಡೆಸಿದ್ದ ಜಲಸಂಪನ್ಮೂಲ ಇಲಾಖೆ ಸಾರ್ವಜನಿಕರ ಹಿತದೃಷ್ಟಿ ಹಾಗೂ ನ್ಯಾಯಾಲಯದ ಆದೇಶ ಪಾಲನೆ ಮಾಡಿ 2022ರ ಮೇ 12ರಂದು (ಗುರುವಾರ) ಕೆಬಿಜೆಎನ್​ಎಲ್ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮೇ 19ರಂದು SSLC ಪರೀಕ್ಷಾ ಫಲಿತಾಂಶ ಪ್ರಕಟ: ಸಚಿವ ಬಿ.ಸಿ.ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.