ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕನ್ನಾಳ ಗ್ರಾಮದ ಚಂದಪ್ಪ ಈರಪ್ಪ ಕುಂಬಾರ ಎಂಬುವರ ಹೊಲದಲ್ಲಿ ಇಸ್ರೋಗೆ ಸೇರಿದ ಪ್ಯಾರಚೂಟ್ನ ಬಿಡಿ ಭಾಗಗಳು ದೊರೆತಿವೆ.
ಹವಾಮಾನ ಕುರಿತಾಗಿ ಮಾಹಿತಿ ಪಡೆಯಲು ಇಸ್ರೋ ಈ ರೀತಿಯ ಸಣ್ಣ ಪ್ಯಾರಚೂಟ್ಗಳನ್ನು ಉಡಾವಣೆ ಮಾಡುತ್ತಾರೆ. ಅಂಥ ಒಂದು ಪ್ಯಾರಚೂಟ್ ಇದಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಪ್ಯಾರಚೂಟ್ ಮೇಲೆ ಹೈದರಾಬಾದ್ ಇಸ್ರೋ ಸಂಸ್ಥೆಯ ವಿಳಾಸ ಬರೆಯಲಾಗಿದ್ದು, ಯಾರಿಗಾದರೂ ಪ್ಯಾರಚೂಟ್ ಸಿಕ್ಕರೆ ದಯವಿಟ್ಟು ವಾಪಸ್ ಕೊಡಿ ಎಂದು ಮನವಿ ಮಾಡಲಾಗಿದೆ.
ಇದನ್ನು ಕಂಡ ಕೂಡಲೇ ಚಂದಪ್ಪ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸ್, ಪ್ಯಾರಚೂಟ್ಅನ್ನು ವಶಕ್ಕೆ ಪಡೆದಿದ್ದಾರೆ. ಪ್ಯಾರಚೂಟ್ ಮೇಲೆ ಬರೆದಿದ್ದ ನಂಬರ್ಗೆ ಕರೆ ಮಾಡಿದಾಗ, ಇಸ್ರೋ ಅಧಿಕಾರಿಗಳು ಮರಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:Gaganayaan: ಡಿಸೆಂಬರ್ನಲ್ಲಿ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಡೌಟ್!