ETV Bharat / state

'ಸಿ.ಟಿ.ರವಿ ಬಹಿರಂಗ ಕ್ಷಮೆ ಕೇಳಿದರೆ ಎಲ್ಲವೂ ಮುಗಿಯುತ್ತದೆ' - M B PATIL

ಸಿ.ಟಿ.ರವಿ ಹೇಳಿಕೆ ಘೋರ ಅಪರಾಧ. ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ರೆ ಎಲ್ಲವೂ ಮುಗಿಯುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಸಚಿವ ಎಂ.ಬಿ.ಪಾಟೀಲ್
ಸಚಿವ ಎಂ.ಬಿ.ಪಾಟೀಲ್ (ETV Bharat)
author img

By ETV Bharat Karnataka Team

Published : 4 hours ago

ಬೆಂಗಳೂರು: "ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲವೂ ಮುಗಿಯುತ್ತದೆ" ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಸಿದ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಸಿ.ಟಿ.ರವಿ ಹೇಳಿರುವ ಪದವನ್ನು ಯಾರೂ ಸೃಷ್ಟಿಸಿ ಹೇಳಲು ಸಾಧ್ಯವಿಲ್ಲ. ಆ ಪದ ಬಳಕೆ ಘೋರ ಅಪರಾಧ, ಕೆಟ್ಟ ಸಂಸ್ಕೃತಿ. ಪ್ರಚೋದನೆ ಆದ್ರೂ ಈ ಶಬ್ದ ಬಳಸ್ತೀರಾ?. ಇದೇನಾ ಸಂಸ್ಕೃತಿ?. ತಪ್ಪು. ನಾವು ಖಂಡಿಸುತ್ತೇವೆ" ಎಂದು ವಾಗ್ದಾಳಿ ನಡೆಸಿದರು.‌

ಸಚಿವ ಎಂ.ಬಿ.ಪಾಟೀಲ್ (ETV Bharat)

"ಸಿ.ಟಿ.ರವಿಯನ್ನು ರಾತ್ರಿಯಿಡೀ ಪೊಲೀಸರು ಸುತ್ತಿಸಿದ ಕುರಿತು ತನಿಖೆ ನಡೆಯುತ್ತಿದೆ. ಗೃಹ ಸಚಿವರು ಅದರ ಬಗ್ಗೆ ಮಾತಾಡ್ತಾರೆ.‌ ಯಾವುದೇ ಹೆಣ್ಣು ಮಗಳು ಊಹಿಸಿಕೊಂಡು ಈ ರೀತಿಯ ಆರೋಪ ಮಾಡಲು ಸಾಧ್ಯವಿಲ್ಲ. ದೇಶದ ಬಗ್ಗೆ ಸಂಸ್ಕೃತಿ ಬಗ್ಗೆ ಪಾಠ ಹೇಳುತ್ತಾರೆ, ಇದು ಅವರ ಸಂಸ್ಕೃತಿ" ಎಂದು ಕಿಡಿ ಕಾರಿದರು.

ಎನ್​​ಕೌಂಟರ್ ಮಾಡಲು ಹೊರಟಿದ್ದರು ಎಂಬ ಬಿಜೆಪಿ ಆರೋಪಕ್ಕೆ, "ಬಳಸಿದ ಪದಕ್ಕೆ ಪ್ರತಿಯಾಗಿ ಇದೆಲ್ಲ‌ ಸೃಷ್ಟಿಸ್ತಿದ್ದಾರೆ. ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲಾ ಮುಗಿಯುತ್ತದೆ. ಅದು‌ ಫೇಕ್ ಎನ್‌ಕೌಂಟರ್ ಅಲ್ಲ ಫೇಕ್ ಕೌಂಟರ್" ಎಂದರು.

"ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟಿದ್ದು. ಹಿಂದೆ ಜಲಸಂಪನ್ಮೂಲ ಖಾತೆಯನ್ನು ನನಗೆ, ಬಸವರಾಜ ಬೊಮ್ಮಾಯಿ, ಹೆಚ್.ಕೆ.ಪಾಟೀಲರಿಗೆ ನೀಡಿದ್ರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಅಧಿವೇಶನದ ಬಳಿಕ ಹೈಕಮಾಂಡ್ ನಾಯಕರು ನಿರ್ಧಾರ ಮಾಡ್ತಾರೆ" ಎಂದು ತಿಳಿಸಿದರು.

ರಾಜ್ಯದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿ, "ಬೆಂಗಳೂರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. 2033-35ಕ್ಕೆ 2ನೇ ವಿಮಾನ ನಿಲ್ದಾಣ ಬೇಕು. ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ ಅನುಕೂಲ ಆಗುತ್ತದೆ. ಮೆರಿಟ್ ಆಧಾರದ ಮೇಲೆ ನಿರ್ಧಾರ ಆಗಬೇಕು. ಕೆಲವೇ ದಿನಗಳಲ್ಲಿ ಏರ್​​ಪೋರ್ಟ್ ಅಥಾರಿಟಿಗೆ ಕಳಿಸ್ತೇವೆ" ಎಂದರು.

ಇದನ್ನೂ ಓದಿ: ಸಿ ಟಿ ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೆ ದೂರು ಕೊಡುತ್ತೇನೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಇದನ್ನೂ ಓದಿ: ತನ್ನ ಬಂಧನ, ಪೊಲೀಸರ ದೂರವಾಣಿ ಕರೆಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು: ಸಿ.ಟಿ. ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.