ETV Bharat / state

ರೌಡಿಶೀಟರ್ ಕೊಲೆ ಪ್ರಕರಣ... ಕೊಲೆಗೆ ಫೈನಾನ್ಸ್ ವ್ಯವಹಾರವೇ ಕಾರಣವಾಯಿತಾ?

author img

By

Published : Jul 26, 2020, 12:47 AM IST

ವಿಜಯಪುರ ನಗರದ ಸೊಲ್ಲಾಪುರ ರಸ್ತೆಯ ರಿಂಗ್ ರಸ್ತೆಯಲ್ಲಿ ಶುಕ್ರವಾರ ರೌಡಿಶೀಟರ್ ಸತೀಶ್​ರೆಡ್ಡಿ ನಾಗನೂರ (28) ಎಂಬಾತನ ಕೊಲೆಯಾಗಿದ್ದು, ಈ ಕೊಲೆಗೆ ಫೈನಾನ್ಸ್ ವ್ಯವಹಾರ ಕಾರಣವಿರಬಹುದು ಎನ್ನಲಾಗಿದೆ.

Is the finance business responsible for the murder of Rowdisheater?
ರೌಡಿಶೀಟರ್ ಕೊಲೆ ಪ್ರಕರಣ..ಕೊಲೆಗೆ ಫೈನಾನ್ಸ್ ವ್ಯವಹಾರವೇ ಕಾರಣವಾಯಿತಾ?

ವಿಜಯಪುರ: ನಗರ ಸಮೀಪದ ಅಲಿಯಾಬಾದ್ ತೋಟದ ಮನೆಯಲ್ಲಿ ಜೋಡಿ ಕೊಲೆ ಪ್ರಕರಣ ಮಾಸುವ ಮುನ್ನವೇ, ರೌಡಿಶೀಟರ್ ಒಬ್ಬನನ್ನು ದುರ್ಷ್ಕಮಿಗಳು ನಡುರಸ್ತೆಯಲ್ಲಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಕೊಲೆಗೆ ಫೈನಾನ್ಸ್ ವ್ಯವಹಾರ ಕಾರಣವಿರಬಹುದು ಎನ್ನಲಾಗಿದೆ.

ಸತೀಶ್ ​ರೆಡ್ಡಿ ನಾಗನೂರ (28) ಕೊಲೆಯಾದ ರೌಡಿಶೀಟರ್. ಸತೀಶ್​ ನಾಗನೂರ ತನ್ನ ಸ್ನೇಹಿತರ ಜೊತೆ ಶುಕ್ರವಾರ ರಾತ್ರಿ ಪಾರ್ಟಿ ಮಾಡಲು ಡಾಬಾಗೆ ಹೋಗಿದ್ದಾನೆ. ಊಟ ಮುಗಿಸಿಕೊಂಡು ಬರುವಾಗ ಸಿದ್ಧಾರೂಢ ಆಶ್ರಮದ ಬಳಿಯ ಸೊಲ್ಲಾಪುರ ರಿಂಗ್​ ರಸ್ತೆಯಲ್ಲಿ ಅಡ್ಡಗಟ್ಟಿದ ಕೆಲ ದುರ್ಷ್ಕಮಿಗಳು, ಸತೀಶ್​ ಕಣ್ಣಿಗೆ ಕಾರದ ಪುಡಿ ಎರಚಿ, ಕಲ್ಲಿನಿಂದ ತಲೆ ಹಾಗೂ ಮುಖ ಜಜ್ಜಿ ಕೊಲೆ ಮಾಡಿದ್ದಾರೆ. ಕೊಲೆಯಾದ ಸತೀಶ ಜೊತೆ ಇನ್ನೂ ಕೆಲ ಸ್ನೇಹಿತರಿದ್ದು, ಘಟನೆಯ ಭೀಕರತೆ ಕಂಡು ಓಡಿ ಹೋಗಿದ್ದಾರೆ.

ಕೊಲೆಯಾದ ಸತೀಶ್​ ಎರಡು ವರ್ಷದ ಹಿಂದೆ ಡಾಬಾ ಒಂದರಲ್ಲಿ ಗಲಾಟೆ ನಡೆಸಿದ್ದು, ಆತನ ವಿರುದ್ಧ ವಿಜಯಪುರ ಪೊಲೀಸರು ರೌಡಿಶೀಟ್ ಓಪನ್ ಮಾಡಿದ್ದರು. ಸತೀಶ್​ ನಾಗನೂರ ಸ್ನೇಹಿತರ ಜೊತೆ ಸೇರಿ ಫೈನಾನ್ಸ್ ನಡೆಸುತ್ತಿದ್ದ ಎನ್ನಲಾಗಿದೆ. ಕೊರೊನಾದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಹಣಕಾಸಿನ ವ್ಯವಹಾರ ಅಷ್ಟಾಗಿ ನಡೆದಿರಲಿಲ್ಲ. ಹಣ ವಿನಿಮಯ ಸಹ ಆಗದೇ ತೊಂದರೆ ಅನುಭವಿಸುತ್ತಿರುವ ಕುರಿತು ತನ್ನ ಸ್ನೇಹಿತರ ಜೊತೆ ಮಾತನಾಡಿದ್ದ ಎನ್ನಲಾಗಿದೆ.

ಇದೇ ಹಣಕಾಸಿನ ವ್ಯವಹಾರ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.