ವಿಜಯಪುರ: ಕಾರಜೋಳ ಗ್ರಾಮ ಪಂಚಾಯತಿಯ ತೊನಶ್ಯಾಳ ಗ್ರಾಮದ ವಾರ್ಡ್ 4ನ್ನು ಪರಿಶಿಷ್ಟ ಜಾತಿಗೆ ಮೀಸಲಿಡುವಂತೆ ಒತ್ತಾಯಿಸಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮದಲ್ಲಿ 2500 ಮತಗಳ ಪೈಕಿ 500 ಅಧಿಕ ಮತಗಳು ಪರಿಶಿಷ್ಟ ಜಾತಿಗೆ ಸೇರಿವೆ. ಗ್ರಾಮದ ವಾರ್ಡ್ ನಂ 04 ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಆದ್ರೆ ಪರಿಶಿಷ್ಟ ಪಂಗಡ ಜನರು ಆ ವಾರ್ಡ್‌ನಲ್ಲಿಲ್ಲ. ಹೀಗಾಗಿ ಮೀಸಲಾತಿ ಹಂಚಿಕೆಯಲ್ಲಿ ಲೋಪಗಳು ಕಾಣಿಸಿಕೊಂಡಿದ್ದು ಅಭಿವೃದ್ಧಿ ಕುಂಠಿತವಾಗಿದೆ. ಮೀಸಲಾತಿ ಮರು ಪರಿಶೀಲನೆ ಮಾಡುವಂತೆ ಅಂಬೇಡ್ಕರ್ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.
ಇನ್ನು ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗಲಿದ್ದು ತೊನಶ್ಯಾಳ ಗ್ರಾಮದ ವಾರ್ಡ್ ನಂ 04 ಎಸ್‌ಟಿ ಮೀಸಲಾತಿ ಒದಗಿಸಲಾಗಿದ್ದು ಆದ್ರೆ ಆ ವಾರ್ಡ್‌ನಲ್ಲಿ ಯಾವುದೇ ಪರಿಶಿಷ್ಟ ಜನರು ಇಲ್ಲವಾದ್ರಿಂದ ಎಸ್‌ಸಿ ಮೀಸಲಾತಿ ಒದಗಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.