ವಿಜಯಪುರ: 56 ದೇಶಗಳಲ್ಲಿ ಮೂರು ದೇಶಗಳು ಮಹಾಮಾರಿ ಕೊರೊನಾ ವೈರಸ್ ಗೆ ಅಲ್ಲೋಲ್ಲ ಕಲ್ಲೋಲವಾಗಲಿವೆ. ಭಾರತಕ್ಕೆ ಆ ಅಪಾಯವಿಲ್ಲ ಎಂದು ಪವಾಡ ಪುರುಷ ಕಲ್ಲೂರಸಿದ್ಧ ಕಾರ್ಣಿಕ ನುಡಿದರು.
ಜಿಲ್ಲೆಯ ಮಕಣಾಪುರ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿಯ ರಾತ್ರಿ ಸೋಮಲಿಂಗ ದೇವಸ್ಥಾನದಲ್ಲಿ ನಡೆಯುವ ಕಾರ್ಣಿಕ ನುಡಿಯಲ್ಲಿ ಈ ಬಾರಿ ಮಹಾಮಾರಿ ಕೊರೊನಾ ರೋಗದ ಭೀಕರತೆ ಬಗ್ಗೆ ಪವಾಡ ಪುರುಷ ಕಲ್ಲೂರುಸಿದ್ಧ ಕಾರ್ಣಿಕ ನುಡಿದು ಚೀನಾ, ಇಟಲಿ, ಇರಾನ್ ದೇಶಗಳು ಇದರ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಲಿವೆ. ಭಾರತವನ್ನು ಕಾಪಾಡುವೆ. ಭೂತಳಾಸಿದ್ಧ (ಶಿವ ಗಣ) ಮೂಲಕ ದೇಶಕ್ಕೆ ಬಂದು ಕಂಟಕವನ್ನು ದೂರ ಮಾಡುವೆ ಎಂದು ನುಡಿದರು.
ಶಿವನ ಮುಖವಾಡ ಹಾಕಿ ಕೈಯಲ್ಲಿ ತ್ರಿಶೂಲ ಹಿಡಿದು ಕಾರ್ಣಿಕ ನುಡಿಯುವದು ಇಲ್ಲಿಯ ವಿಶೇಷತೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ ಭಾಗದಲ್ಲಿ ಈ ಕಾರ್ಣಿಕ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.