ವಿಜಯಪುರ : ಐಎಂ ಎ ಜ್ಯುವೆಲ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ದಂಪತಿ ದೂರು ನೀಡಿದ್ದು,ಹೆಚ್ಚಿನ ಹಣದ ಆಸೆಗಾಗಿ ಲಕ್ಷಾಂತರ ರೂ. ಕಳೆದುಕೊಂಡು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ.
ನಗರದ ಬಡಿ ಕಮಾನ ಹಲ್ಲು ನಿವಾಸಿ ಮೆಹಬೂಬ್ ಕುಂಟೋಜಿ ಹಾಗೂ ಅವರ ಪತ್ನಿ ಕೌಸರಬಾನು ತಲಾ 2ಲಕ್ಷದಂತೆ 4ಲಕ್ಷ ರೂ. ಹಣ ತೊಡಗಿಸಿದ್ದರು. ಮೊದಲು ನಾಲ್ಕು ತಿಂಗಳು ಪ್ರತಿ ತಿಂಗಳಂತೆ 4ಸಾವಿರ ಬಡ್ಡಿ ಬಂದ ಮೇಲೆ ಈ ಹಗರಣ ಬಯಲಾಗಿದೆ.
ಇದೇ ರೀತಿ ವಿಜಯಪುರದ ಸೈಯದ್ ಮುಕ್ತಾರ ಜಾಗೀರದಾರ ಹಾಗೂ ಅವರ ಪತ್ನಿ ಸಯೀದಾ ತಲಾ 8ಲಕ್ಷ ರೂ, ಹಾಗೂ 6ಲಕ್ಷ ರೂ. ಹಣ ಹೂಡಿದ್ದಾರೆ. ನಾಲ್ವರು ಪ್ರತ್ಯೇಕ ವಾಗಿ ದೂರು ನೀಡಿದ್ದಾರೆ.ಇನ್ನೂ ಮುಂದಿನ ದಿನ ಎಷ್ಟು ಜನ ವಂಚನೆಗೆ ಒಳಗಾಗಿದ್ದಾರೆ ಎಂಬುದು ಅವರು ನೀಡುವ ದೂರಿನ ಮೇಲೆ ಗೊತ್ತಾಗಲಿದೆ.